Breaking News

AI ಕ್ಯಾಮೆರಾ ಯಡವಟ್ಟು – ಗಿಟಾರ್‌ಗೆ ಹೆಲ್ಮೆಟ್ ಹಾಕಿಲ್ಲ ಅಂತ ದಂಡ

Spread the love

ಬೆಂಗಳೂರು: ಟ್ರಾಫಿಕ್ ರೂಲ್ಸ್  ಉಲ್ಲಂಘನೆ ತಡೆಗೆ ಅಳವಡಿಸಲಾಗಿರುವ ಎಐ ಕ್ಯಾಮೆರಾ  ಯಡವಟ್ಟೊಂದನ್ನು ಮಾಡಿದೆ. ಸ್ಕೂಟಿಯಲ್ಲಿ ಕೊಂಡೊಯ್ಯಲಾಗುತ್ತಿದ್ದ ಗಿಟಾರ್ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿದೆ.

ಸೌವಿಕ್ ದತ್ತ ಎಂಬುವವರು ಸ್ಕೂಟರ್‌ನಲ್ಲಿ ಹೆಬ್ಬಾಳದಿಂದ  ಟಿನ್ ಫ್ಯಾಕ್ಟರಿಗೆ ಕಡೆಗೆ ಹೊರಟಿದ್ದರು. ಈ ವೇಳೆ ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಎಐ ಕ್ಯಾಮೆರಾ, ಹಿಂಬದಿಯಲ್ಲಿದ್ದ ಗಿಟಾರ್ ಅನ್ನು ಮನುಷ್ಯ ಎಂದುಕೊಂಡು ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿದೆ.

ಆನ್‌ಲೈನ್‌ನಲ್ಲಿ ಬೈಕ್ ಸವಾರನಿಗೆ ಫೋಟೋ ಸಮೇತ ಚಲನ್ ರವಾನೆಯಾಗಿದೆ. ಫೋಟೋ ನೋಡಿ ಬೈಕ್ ಸವಾರ ಶಾಕ್ ಆಗಿದ್ದು, ಎಐ ಕ್ಯಾಮೆರಾ ಮಾಡಿದ ಯಡವಟ್ಟನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಸದ್ಯ ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ