Breaking News

ಮೋದಿಜೀ ಆರೋಗ್ಯ, ದೇಶ ಸೇವೆಗಾಗಿ ಬಿಜೆಪಿಯಿಂದ ‘ಆಶೀರ್ವಾದ ದೀಪ’ ಸಂಭ್ರಮ

Spread the love

ಬಾಗಲಕೋಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ *‘ಸೇವಾ ಸಂಕಲ್ಪ ಅಭಿಯಾನ’*ದಡಿ ನಗರದ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಮೋದಿ ಅವರ ಆರೋಗ್ಯ ಹಾಗೂ ದೇಶ ಸೇವೆಗಾಗಿ ‘ಆಶೀರ್ವಾದ ದೀಪ’ ದೀಪೋತ್ಸವವನ್ನು ಆಚರಿಸಲಾಯಿತು.
ದೇವಸ್ಥಾನದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ‘ಆಶೀರ್ವಾದ ದೀಪ’ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಶ್ರೀನಾಥ ಸಜ್ಜನ, ಶ್ರೀಕಾಂತ ಪತ್ತಾರ, ಸುರೇಶ ಮಜ್ಜಗಿ, ದುಳಪ್ಪ ಕೊಪ್ಪದ, ರಾಜು ಕೋಟಿಕಲ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ನಂತರ ವಿದ್ಯಾಗಿರಿಯ ಕಾಲೇಜು ಸರ್ಕಲ್ ಬಳಿಯ ಕಾಶಿ ವಿಶ್ವನಾಥ ದೇವಸ್ಥಾನ, ನವನಗರದ ಸೆಕ್ಟರ್ ನಂ. ೨೯ರ ಶಿಉದ್ಭವ ಗಣಪತಿ ದೇವಸ್ಥಾನ ಹಾಗೂ ನಗರದ ವಲ್ಲಭಭಾಯಿ ಚೌಕ್‌ನ ಶಹರ ಗಜಾನನ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಸನ್ನಿಧಿಯಲ್ಲಿ ಮೋದಿ ಅವರ ಆರೋಗ್ಯ ಮತ್ತು ದೇಶ ಸೇವೆಗಾಗಿ ‘ಆಶೀರ್ವಾದ ದೀಪ’ಗಳನ್ನು ಬೆಳಗಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಈ ಸರ್ಕಾರ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿನ ಹಾಗೆ ಆಗಿದೆ: ಹೆಚ್‌ಡಿಕೆ

Spread the loveಬೆಂಗಳೂರು: ಈ ಸರ್ಕಾರ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿನ ಹಾಗೆ ಆಗಿದೆ ಎಂದು ರಾಜ್ಯ ಸರ್ಕಾರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ