Breaking News

ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗಿದೆ: ಸಿಎಂ ಬಹಿರಂಗ ಹೇಳಿಕೆ

Spread the love

ಬೆಂಗಳೂರು: ಗ್ಯಾರಂಟಿ ಸೇರಿ ವಿವಿಧ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ SCSP-TSP ಹಣವನ್ನ ಬಳಕೆ ಮಾಡಿಕೊಳ್ಳಲಾಗಿದೆ ಅಂತ ಸಿಎಂ ಡಿಕೆ ಶಿವಕುಮಾರ್  ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತಾಡಿದ ಅವರು, ಸಮಾಜ ಕಲ್ಯಾಣ ‌ಇಲಾಖೆ ಹಣ ಬೇರೆ ಇಲಾಖೆ, ಯೋಜನೆಗಳಿಗೆ ಬಳಕೆ‌ ಮಾಡಿದ್ದೇವೆ ಅಂತ ಒಪ್ಪಿಕೊಂಡರು.

ಮುಂದುವರಿದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ ಅವರು, ಕೇಂದ್ರ ಸರ್ಕಾರವೂ ನಾವು ಮಾಡಿದಂತೆ ಕಾಯ್ದೆ ಮಾಡಿ ಹಣ ಮೀಸಲು ಇಡಲಿ. ಸುಮ್ಮನೆ ಮಾತಾಡೋದು ಬೇಡ ಅಂತ ಕಿಡಿಕಾರಿದರು.

SCSP-TSP ಹಣ ಗ್ಯಾರಂಟಿಗೆ ಬಳಕೆ ಮಾಡ್ತಾ ಇದ್ದೀರಾ ಅಂತ ವಿಪಕ್ಷಗಳು ಆರೋಪ ಮಾಡ್ತಾ ಇದ್ದವು. ಆಗ ಸಚಿವರಾಗಿದ್ದ ಮಹಾದೇವಪ್ಪ ಸೇರಿ ಸಿಎಂ ಸರ್ಕಾರದ ಮಂತ್ರಿಗಳು ಗ್ಯಾರಂಟಿ ಸೇರಿ ವಿವಿಧ ಯೋಜನೆಗೆ SCSP-TSP ಹಣ ಬಳಕೆ ಮಾಡಿಕೊಂಡಿಲ್ಲ ಅಂತ ವಾದ ಮಾಡ್ತಾ ಇದ್ದರು. ಈಗ ಖುದ್ದು ಸಿಎಂ ಅವರೇ ಒಪ್ಪಿಕೊಂಡಿರೋದು ಸರ್ಕಾರ ದಲಿತರ ಹಣ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಅನ್ನೋದು ಸತ್ಯವಾಗಿದೆ.


Spread the love

About Laxminews 24x7

Check Also

2 ವರ್ಷದಿಂದ ಆ ಹುಡುಗ ಜೈಲಲ್ಲಿದ್ದಾನೆ, KPSC, ನೈಸ್‌ ವಿಷಯ ಬಂದಾಗ ಮೊಬೈಲ್‌ ಸಿಕ್ಕಿದ್ದು ಹೇಗೆ? – ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

Spread the loveಹಾಸನ: ಎರಡು ವರ್ಷದಿಂದ ಆ ಹುಡುಗ (ಪ್ರಜ್ವಲ್‌ ರೇವಣ್ಣ) ಜೈಲಲ್ಲಿದ್ದಾನೆ. ಬಿಡದಿ, ಕೆಪಿಎಸ್‌ಸಿ , ನೈಸ್ ವಿಷಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ