Breaking News

ಗೋಕರ್ಣದ ತದಡಿಯಲ್ಲಿ ಬೋಟ್ ಮುಳುಗಡೆ – ನಾಲ್ವರು ಮೀನುಗಾರರ ರಕ್ಷಣೆ

Spread the love

ಕಾರವಾರ: ಹೂಳು ಮತ್ತು ಅಲೆಗಳ ಅಬ್ಬರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಸಮುದ್ರದ ಅಳವೆಯಲ್ಲಿ ಮುಳಗಿ ಹೋಗಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರನ್ನ ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಭಾಗದ ತದಡಿ ಬಂದರಿನಲ್ಲಿ ನಡೆದಿದೆ.

ಸುರೇಂದ್ರ ಹರಿಕಂತ್ರ ಎನ್ನುವವರಿಗೆ ಸೇರಿದ ಲಕ್ಷ್ಮೀಕೃಪ ಎನ್ನುವ ಹೆಸರಿನ ಬೋಟ್ ಇದಾಗಿದ್ದು, ಇಂದು ಗೋಕರ್ಣದ ತದಡಿಯ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಆದರೇ ಸ್ವಲ್ಪ ದೂರದಲ್ಲೇ ಹೂಳು ತುಂಬಿದ ಅಳವೆಯಲ್ಲಿ ಸಿಲುಕಿಕೊಂಡಿದ್ದು, ಅಲೆಗಳ ಹೊಡೆತಕ್ಕೆ ತಳಭಾಗದಲ್ಲಿ ಹಾನಿಯಾಗಿ ಮುಳುಗಿದೆ. ಬೋಟ್ ಮುಳುಗಡೆಯಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಹಾನಿಯಾಗಿದೆ.

ಎರಡು ದಿನದ ಹಿಂದೆ ಇದೇ ಜಾಗದಲ್ಲಿ ಶ್ರೀದೇವಿ ಹೆಸರಿನ ಬೋಟ್ ಮುಳುಗಡೆಯಾಗಿತ್ತು. ತದಡಿಯ ಅಳಿವೆಯ ಹೂಳಿನಿಂದ ಪದೇಪದೇ ಇದೇ ಜಾಗದಲ್ಲಿ ಬೋಟುಗಳು ಮುಳುಗುತಿದ್ದು, ಒಂದೇ ವಾರದಲ್ಲಿ ಎರಡು ಬೋಟ್ ಮುಳುಗಡೆಯಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ