Breaking News

ಝೆನ್‌-ಜಿ, ಆಲ್ಫಾ ಅಂತ ಕರೆಯಬೇಡಿ.. ‘ಮಗ-ಮಗಳು’ ಎಂದು ಕರೆಯಿರಿ: ಅಸ್ಸಾಂ ಸಿಎಂ

Spread the love

ಗುವಾಹಟಿ: ಝೆನ್‌-ಜಿ , ಆಲ್ಫಾ ಅನ್ನೋದೆಲ್ಲಾ ಯುರೋಪಿಯನ್‌ ಪರಿಕಲ್ಪನೆಯನ್ನು ಲೇಬಲ್‌ ಮಾಡುತ್ತದೆ. ಅವರನ್ನು ‘ಮಗ-ಮಗಳು’ ಅಂತ ಕರೆಯಬೇಕು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ  ತಿಳಿಸಿದ್ದಾರೆ. ಅಸ್ಸಾಂ ಯುವಜನತೆ ಮತ್ತು ಅಭಿವೃದ್ಧಿಗೆ ತನ್ನದೇ ಆದ ವಿಧಾನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಗುವಾಹಟಿಯಲ್ಲಿ 80ನೇ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ‘ನಾನು ಝೆನ್‌-ಜಿ ಅಥವಾ ಜನರಲ್ ಆಲ್ಫಾ ಪರಿಕಲ್ಪನೆಯನ್ನು ನಂಬುವುದಿಲ್ಲ. ಅದು ಪಾಶ್ಚಿಮಾತ್ಯ ಪರಿಕಲ್ಪನೆ. ನಮಗೆ, ವಿದ್ಯಾರ್ಥಿಗಳು ಝೆನ್‌-ಜಿ ಅಥವಾ ಜನರಲ್ ಆಲ್ಫಾ ಅಲ್ಲ. ಬದಲಾಗಿ ನಮ್ಮ ಸ್ವಂತ ಮಗ ಮತ್ತು ಮಗಳು ಎಂದು ಮಾತನಾಡಿದ್ದಾರೆ.

ಯುವಜನರ ಕೌಶಲ್ಯ ಅಭಿವೃದ್ಧಿ ಮತ್ತು ಸಬಲೀಕರಣದ ಮೇಲೆ ಕೇಂದ್ರೀಕರಿಸುವ ಪ್ರತ್ಯೇಕ ಇಲಾಖೆಯನ್ನು ಸರ್ಕಾರ ರಚಿಸಲಿದೆ. ಉದ್ಯೋಗ ಮತ್ತು ಇತರ ಅವಕಾಶಗಳಿಗೆ ಅವರನ್ನು ಸಿದ್ಧಪಡಿಸುವತ್ತ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಅಸ್ಸಾಂ ಅಭಿವೃದ್ಧಿಯ ಬಗ್ಗೆಯೂ ಸಿಎಂ ಮಾತನಾಡಿದರು. ಮುಂದಿನ ಐದು ವರ್ಷಗಳಲ್ಲಿ ರಸ್ತೆಗಳು, ಶಿಕ್ಷಣ, ನಗರಾಭಿವೃದ್ಧಿ, ಗ್ರಾಮೀಣ ಮೂಲಸೌಕರ್ಯ ಮತ್ತು ಇತರ ಕ್ಷೇತ್ರಗಳಿಗೆ ಸುಮಾರು 1.5 ಲಕ್ಷ ಕೋಟಿ ರೂ. ಹೂಡಿಕೆ ಕಾರ್ಯಕ್ರಮ ಸೇರಿದಂತೆ ಹಲವಾರು ಸರ್ಕಾರಿ ಯೋಜನೆಗಳನ್ನು ನೀಡಲಾಗುವುದು. ಇದರಲ್ಲಿ ಕೇಂದ್ರದಿಂದ 1 ಲಕ್ಷ ಕೋಟಿ ರೂ. ಮತ್ತು ರಾಜ್ಯದಿಂದ 50,000 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ