ಬೆಂಗಳೂರು: ಇಲ್ಲಿನ ಬಾಣಸವಾಡಿಯ ಕ್ಲಬ್ನಲ್ಲಿ ಕರ್ಮಕಾಂಡ ಬೆಳಕಿಗೆ ಬಂದಿದ್ದು, ಕ್ಲಬ್ನ ಲೇಡಿಸ್ ಟಾಯ್ಲೆಟ್ ಹಾಗೂ ಡ್ರೆಸ್ಸಿಂಗ್ ರೂಮ್ನಲ್ಲಿ ಸಿಸಿಟಿವಿ ಕ್ಯಾಮೆರಾ ಪತ್ತೆಯಾಗಿದೆ.
ಕಳೆದ 15 ದಿನಗಳ ಹಿಂದೆ ಕ್ಲಬ್ನ ಸ್ವಿಮ್ಮಿಂಗ್ ಪೂಲ್ ಓಪನ್ ಆಗಿತ್ತು. ಈ ವೇಳೆ ಮಗಳನ್ನು ಕರೆದುಕೊಂಡು ಹೋಗಿದ್ದ ತಾಯಿ ಬಟ್ಟೆ ಬದಲಾಯಿಸುವ ವೇಳೆ ಸಿಸಿಟಿವಿ ಇರುವುದನ್ನು ಗಮನಿಸಿ, ಗಾಬರಿಗೊಂಡಿದ್ದಾರೆ. ಕೂಡಲೇ ಕ್ಲಬ್ನ ಆಡಳಿತ ಮಂಡಳಿಗೆ ಮಹಿಳೆಗೆ ದೂರು ದಾಖಲಿಸಿದ್ದಾರೆ.
ಸಿಸಿಟಿವಿ ಇದ್ದರೂ ಕೂಡ ಕ್ಲಬ್ನ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಮಹಿಳೆಯರು ಕ್ಲಬ್ನ ಸೆಕ್ರೆಟರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಸಂಬಂಧ ಮಹಿಳೆಯರು ಧಿಕೃತವಾಗಿ ದೂರು ನೀಡಲು ಮುಂದಾಗಿದ್ದಾರೆ.
Laxmi News 24×7