Breaking News

ಲೋಕಸಭೆ ಬಳಿಕ ಇಂದು ರಾಜ್ಯಸಭೆಯಲ್ಲೂ ಕೇರಳದ ಹೆಸರು ಮರುನಾಮಕರಣ ಮಸೂದೆ ಅಂಗೀಕಾರ

Spread the love

ನವದೆಹಲಿ: ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಮರು ನಾಮಕರಣ ಮಾಡುವ ಮಸೂದೆಯೂ ಲೋಕಸಭೆ ಬಳಿಕ ಬುಧವಾರ(ಆ. 12) ರಾಜ್ಯಸಭೆಯಲ್ಲೂ ವಿರೋಧ ಪಕ್ಷದ ಸದಸ್ಯರ ಘೋಷಣೆಗಳು ಮತ್ತು ಪ್ರತಿಭಟನೆಗಳ ನಡುವೆ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಗಿದೆ.
ಮಂಗಳವಾರ ‘ಕೇರಳ(ಹೆಸರು ಬದಲಾವಣೆ) ಮಸೂದೆ-2026’ ಅನ್ನು ಯಾವುದೇ ಚರ್ಚೆಯಿಲ್ಲದೆ ಲೋಕಸಭೆ ಅಂಗೀಕರಿಸಿತ್ತು. 2024ರಲ್ಲಿ ಕೇರಳ ವಿಧಾನಸಭೆಯು ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ನಿರ್ಣಯವನ್ನು ಅಂಗೀಕರಿಸಿತು.
ರಾಜ್ಯವನ್ನು ಸಾಮಾನ್ಯವಾಗಿ ಮಲಯಾಳಂನಲ್ಲಿ ‘ಕೇರಳಂ’ ಎಂದು ಕರೆಯಲಾಗುತ್ತದೆಯಾದರೂ, ಸಂವಿಧಾನದಲ್ಲಿ ಅಧಿಕೃತ ಹೆಸರು ‘ಕೇರಳ’ ಎಂದಿದೆ. ಈ ಹಿನ್ನೆಲೆ ಮಲಯಾಳಂನ ಸ್ಥಳೀಯ ಉಚ್ಚಾರಣೆಗೆ ಸರಿಹೊಂದುವಂತೆ ಅಧಿಕೃತ ಹೆಸರನ್ನು ಬದಲಾಯಿಸುವಂತೆ ರಾಜ್ಯ ಸರ್ಕಾರವು ಕೇಂದ್ರವನ್ನು ಕೋರಿದೆ.
ಕೇಂದ್ರ ಸಚಿವ ಸಂಪುಟವು 2026 ಫೆಬ್ರವರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಿತು. ತರುವಾಯ, ಸಂವಿಧಾನದ 3 ನೇ ವಿಧಿ (ಕೇರಳ ಹೆಸರು ಬದಲಾವಣೆ ಮಸೂದೆ 2026) ಅಡಿಯಲ್ಲಿ ಅಗತ್ಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಹೆಸರು ಬದಲಾವಣೆ ಮಸೂದೆಯನ್ನು ಸಂಸತ್ತಿನಲ್ಲಿ ಪರಿಚಯಿಸಲಾಯಿತು.
ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರವಾಗಿದ್ದು, ಮುಂದಿನ ಸಾಂವಿಧಾನಿಕ ಪ್ರಕ್ರಿಯೆ ಪೂರ್ಣಗೊಂಡ ನಂತರ ರಾಜ್ಯದ ಅಧಿಕೃತ ಹೆಸರು ‘ಕೇರಳಂ’ ಎಂದು ಮರುನಾಮಕರಣವಾಗುತ್ತದೆ

Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ