ಜನನಾಂಗಕ್ಕೆ ಒದ್ದು, ಆತನ ಎದೆ ಮೇಲೆ ಎರಡೂಕಾಲಿಟ್ಟು ನಿಂತಿದ್ರಂತೆ #ದರ್ಶನ್!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರೋ 14ನೇ ಆರೋಪಿ ಹಾಗೂ #ದರ್ಶನ್‌ಗೆ 2003ರಿಂದಲೂ ಸ್ನೇಹಿತನಾಗಿರೋ #ಪ್ರದೂಷ್ ಬಿಚ್ಚಿಟ್ಟೋ ಒಂದೊಂದೂ ಸಾಕ್ಷ್ಯಗಳು ಆಘಾತಕ್ಕೀಡಾಗುವಂತೆ ಮಾಡಿವೆ. ತನ್ನ ಮಾಫಿ ಸಾಕ್ಷಿ ಅರ್ಜಿಯಲ್ಲಿ ತಾನು ಕಣ್ಣಾರೆ ಕಂಡದ್ದು, ಕೇಳಿದ್ದು, ತನ್ನ ಗಮನಕ್ಕೆ ಬಂದಿದ್ದು ಎಲ್ಲವನ್ನೂ ತನ್ನ 11 ಪುಟಗಳ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ಅರ್ಜಿಯಲ್ಲಿರೋ ಸ್ಫೋಟಕ ಅಂಶಗಳು!
2003ರಿಂದ ಆರೋಪಿ ಆರೋಪಿ ದರ್ಶನ್ ನನಗೆ ಪರಿಚಯವಿದ್ದರು. ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಪರಿಚಯವಾಗಿತ್ತು. ಜೂನ್ 8 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಪವನ್ ರೆಸ್ಟೋರೆಂಟ್‌ಗೆ ಬಂದಿದ್ದ. ಈ ವೇಳೆ ದರ್ಶನ್‌ಗೆ ಮೊಬೈಲ್‌ನಲ್ಲಿ ಏನನ್ನೋ ತೋರಿಸಿದ್ದ. ಬಳಿಕ ಪವಿತ್ರಾ ಗೌಡ ನಿವಾಸದ ಕಡೆಗೆ ಕಾರು ಚಲಾಯಿಸುವಂತೆ ದರ್ಶನ್ ಸೂಚಿಸಿದ್ದರು. ಸಂಜೆ 4.30ಕ್ಕೆ ಪವಿತ್ರಾ ಗೌಡ ನಿವಾಸ ತಲುಪಿ, ದರ್ಶನ್ ಹಾಗೂ ಪವಿತ್ರ ಒಂದೇ ಕಾರಿನಲ್ಲಿ ಪಟ್ಟಣಗೆರೆ ಶೆಡ್‌ಗೆ ಬಂದಿದ್ರು. ಶೆಡ್ ಪ್ರವೇಶಿಸಿದಾಗ ಸುಮಾರು 30 ವರ್ಷದ ವ್ಯಕ್ತಿಯೊಬ್ಬ ತಲೆಬಾಗಿಸಿಕೊಂಡು ಕುಳಿತಿದ್ದ.ಆತನ ಸುತ್ತ ರಾಘವೇಂದ್ರ, ಪವನ್, ನಾಗರಾಜ್, ನಂದೀಶ್ ಹಾಗೂ ಇತರರು ಸ್ಥಳದಲ್ಲಿದ್ದರು. ದರ್ಶನ್ ರೇಣುಕಾಸ್ವಾಮಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಮತ್ತು ಖಾಸಗಿ ಅಂಗಗಳ ಫೋಟೋ ಕಳುಸ್ತೀಯಾ ಅಂತ ಹಲ್ಲೆ ಮಾಡಿದ್ರು. ಪವಿತ್ರಾ ಗೌಡರಿಂದ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಸಿದ್ರು. ದರ್ಶನ್ ನೈಲಾನ್ ಹಗ್ಗದಿಂದ ರೇಣುಕಾಸ್ವಾಮಿಗೆ ಮೂರರಿಂದ ನಾಲ್ಕು ಬಾರಿ ಹೊಡೆದಿದ್ರು. ಈ ವೇಳೆ ಪವನ್ ರೇಣುಕಾಸ್ವಾಮಿಯ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಓದುತ್ತಿದ್ದ.ಸಂದೇಶಗಳನ್ನ ಕೇಳಿಸಿಕೊಂಡ ದರ್ಶನ್, ಮತ್ತೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ.
ಬಳಿಕ ರೇಣುಕಾಸ್ವಾಮಿಯ ಒಳಉಡುಪನ್ನೂ ತೆಗೆದುಹಾಕಲಾಯ್ತು. ದರ್ಶನ್ ರೇಣುಕಾಸ್ವಾಮಿಯ ಖಾಸಗಿ ಅಂಗಕ್ಕೆ ಹಲವು ಬಾರಿ ಒದ್ದರು. ಬಳಿಕ ಎರಡೂ ಕಾಲುಗಳನ್ನ ರೇಣುಕಾಸ್ವಾಮಿಯ ಎದೆ ಮೇಲಿಟ್ಟು ತುಳಿದಿದ್ರು. ಸಂಜೆ ಸುಮಾರು 5.30ಕ್ಕೆ ದರ್ಶನ್ ಮತ್ತು ವಿನಯ್ ಸ್ಥಳದಿಂದ ತೆರಳಿದ್ದರು.
ರೇಣುಕಾಸ್ವಾಮಿಯನ್ನು ನೋಡಿಕೊಳ್ಳಲು ರಾಘವೇಂದ್ರ, ನಂದೀಶ್, ದೀಪಕ್, ಲಕ್ಷ್ಮಣ್ ಮತ್ತಿತರರು ಸ್ಥಳದಲ್ಲೇ ಉಳಿದಿದ್ದರು. ರೇಣುಕಾಸ್ವಾಮಿ ಮೃತಪಟ್ಟಿರುವ ವಿಚಾರವನ್ನು ಮನೆಗೆ ತೆರಳಿ ನಾನು ದರ್ಶನ್‌ಗೆ ತಿಳಿಸಿದ್ದೆ. ಈ ವಿಚಾರ ಕೇಳಿ ದರ್ಶನ್ ಕೂಡ ಆಘಾತಕ್ಕೊಳಗಾಗಿದ್ದರು. ತನ್ನ ಬಳಿ ಇದ್ದ ಗನ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ರು. ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಹೀಗಾಗಿ ಅಂದು ಸಹಾಯ ಮಾಡಿದ್ದೆ. ಈಗ ತನಗೆ ಪಶ್ಚಾತ್ತಾಪ ಆಗಿದ್ದು ಸಾಕ್ಷಿ ಹೇಳುತ್ತಿದ್ದೇನೆ.
ಹೀಗಂತ ಪ್ರದೋಷ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಇದೇ ಸಾಕ್ಷ್ಯ ದರ್ಶನ್‌ಗೆ ಕಂಟಕವಾಗೋ ಎಲ್ಲಾ ಲಕ್ಷಣಗಳಿವೆ.
Laxmi News 24×7