Breaking News

ಹಿರಿಯ ರಾಜಕಾರಣಿ, ಮಾಜಿ ರಾಜ್ಯಪಾಲ ಡಿ. ವೈ. ಪಾಟೀಲ್ ನಿಧನ: ಕುಟುಂಬಸ್ಥರಿಗೆ ಡಾ. ಪ್ರಭಾಕರ್ ಕೋರೆ ಸಾಂತ್ವನ

Spread the love

ಹಿರಿಯ ರಾಜಕಾರಣಿ, ಮಾಜಿ ರಾಜ್ಯಪಾಲ ಡಿ. ವೈ. ಪಾಟೀಲ್ ನಿಧನ: ಕುಟುಂಬಸ್ಥರಿಗೆ ಡಾ. ಪ್ರಭಾಕರ್ ಕೋರೆ ಸಾಂತ್ವನ
ಇತ್ತೀಚೆಗೆ ಕೊಲ್ಲಾಪುರದಲ್ಲಿ ನಿಧನರಾದ ಪಶ್ಚಿಮ ಬಂಗಾಳ, ಬಿಹಾರ ಮತ್ತು ತ್ರಿಪುರಾ ರಾಜ್ಯಗಳ ಮಾಜಿ ರಾಜ್ಯಪಾಲ ಹಾಗೂ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಡಿ. ವೈ. ಪಾಟೀಲ್ ಅವರ ನಿವಾಸಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಪದ್ಮಶ್ರೀ ಡಾ. ಪ್ರಭಾಕರ್ ಕೋರೆ ಅವರು ರವಿವಾರ ಸಂಜೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಕೊಲ್ಲಾಪುರದಲ್ಲಿ ನಿಧನರಾದ ಪಶ್ಚಿಮ ಬಂಗಾಳ, ಬಿಹಾರ ಮತ್ತು ತ್ರಿಪುರಾ ರಾಜ್ಯಗಳ ಮಾಜಿ ರಾಜ್ಯಪಾಲ ಹಾಗೂ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಡಿ. ವೈ. ಪಾಟೀಲ್ ಅವರ ನಿವಾಸಕ್ಕೆ ಆಗಮಿಸಿದ ಡಾ. ಪ್ರಭಾಕರ್ ಕೋರೆ ಅವರು,
ಡಿ. ವೈ. ಪಾಟೀಲ್ ಅವರೊಂದಿಗೆ ಹೊಂದಿದ್ದ ನಿಕಟ ಬಾಂಧವ್ಯವನ್ನು ಸ್ಮರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್, ನ್ಯಾಯವಾದಿ ರವಿರಾಜ್ ಪಾಟೀಲ್, ಡಿ. ವೈ. ಪಾಟೀಲ್ ಅವರ ಪುತ್ರ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ, ಕೊಲ್ಲಾಪುರ ಶಾಸಕ ಸತೇಜ್ ಪಾಟೀಲ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು

Spread the love

About Laxminews 24x7

Check Also

ಚುನಾವಣಾ ಆಯೋಗದ ಪರ ಸಮರ್ಥನೆ – ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

Spread the loveಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ಆಯುಕ್ತರ ನಡುವೆ ಭಿನ್ನಾಭಿಪ್ರಾಯವಿರುವ ಕಾರಣ ಚುನಾವಣಾ ಆಯೋಗವನ್ನು ಸಮರ್ಥನೆ ಮಾಡಿಕೊಳ್ತಿರುವ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ