Breaking News

ಚೆನ್ನಮ್ಮ ಅವ್ರು ಕೊನೆಯ ದಿನಗಳಲ್ಲಿ ಪ್ರಜ್ವಲ್‌ ರೇವಣ್ಣರನ್ನ ನೋಡಬೇಕೆಂಬ ಆಸೆ ಇಟ್ಟುಕೊಂಡಿದ್ರು: ಕುಮಾರಸ್ವಾಮಿ

Spread the love

ಹಾಸನ: ಚೆನ್ನಮ್ಮ ಅವರು ಕೊನೆಯ ದಿನಗಳಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನ ನೋಡಬೇಕೆಂಬ ಆಸೆ ಇಟ್ಟುಕೊಂಡಿದ್ರು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಭಾವುಕರಾದರು.

ಹಾಸನ  ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಹಲವು ಭಾವನಾತ್ಮಕ ವಿಚಾರಗಳನ್ನ ಹಂಚಿಕೊಂಡರು. ಚೆನ್ನಮ್ಮ ಅವರು ಬಹುಶಃ ಇನ್ನೂ 3-4 ವರ್ಷಗಳ ಕಾಲ ಬದುಕುತ್ತಿದ್ದರು, ಈ ದಿನ ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಇದು ಆ ದೇವರು ತೀರ್ಮಾನ ಮಾಡಿರೋದು ನಾವಲ್ಲ. ದೇವರ ತೀರ್ಮಾನಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ. ಆದ್ರೆ ಚೆನ್ನಮ್ಮ ಅವರು ಕೊನೆಯ ದಿನಗಳಲ್ಲಿ ಪ್ರಜ್ವಲ್‌ ರೇವಣ್ಣ  ಅವರನ್ನ ನೋಡಬೇಕು ಎಂಬ ಆಸೆ ಇಟ್ಟುಕೊಂಡಿದ್ರು ಎಂದು ಹೇಳಿದರು.

ನಮ್ಮಪ್ಪ ಅಮ್ಮ ಸಂತೋಷ ಪಟ್ಟ ದಿನಗಳು ಕಡಿಮೆ
ಧಾರ್ಮಿಕವಾಗಿ ಎಲ್ಲಾ ವಿಧಿ ವಿಧಾನಗಳನ್ನ ಅತ್ಯಂತ ಶ್ರದ್ಧೆಯಿಂದ ನಡೆಸಿದ್ದೇವೆ. ನಮ್ಮ ತಂದೆ-ತಾಯಿ ಹಲವಾರು ರೀತಿಯ ಏಳು, ಬೀಳು ನೋವುಗಳನ್ನ ಕಂಡಿದ್ದಾರೆ. ಸಂತೋಷವಂತೂ ಅವರು ಪಟ್ಟಿಲ್ಲ, ಸಂತೋಷ ಪಟ್ಟ ದಿನಗಳು ಕಡಿಮೆ, ಎಲ್ಲರ ಬಗ್ಗೆ ಚಿಂತೆ ಮಾಡಿಕೊಂಡು ಬಂದವರು. ಮದುವೆಯಾದಾಗಿನಿಂದಲೂ ಆರೋಗ್ಯ ಸಮಸ್ಯೆ ಇತ್ತು. ಶಿವರಾತ್ರಿ ಹಬ್ಬದಂದು ಆಸಿಡ್ ಪ್ರಕರಣದಲ್ಲಿ ಅವರು ಬದುಕಿರುವುದೇ ಒಂದು ಪವಾಡ, 2 ತಿಂಗಳು ಪ್ರಜ್ಞೆ ಇರಲಿಲ್ಲ, ಹೋರಾಟ ಮಾಡಿ ಮರು ಜೀವ ಪಡೆದರು. ರಾಜರಾಜೇಶ್ವರಿ ತಾಯಿ ಆಶೀರ್ವಾದದಿಂದ ಉಳಿದರು, ರಾಜಕಾರಣದಲ್ಲಿ ಬಿಡುವು ಇಲ್ಲದಿದ್ದರೂ ಅವರಿಗೆ ನಮ್ಮ ತಂದೆ ಮಾನಸಿಕ ಧೈರ್ಯ ತುಂಬಿದ್ದಾರೆ ಎಂದು ತಿಳಿಸಿದರು.

ಒಂದು ವರ್ಷದಿಂದ ನರಕಯಾತ್ರೆ ಅನುಭವಿಸಿದ್ರು
ಕಳೆದ ಒಂದೂವರೆ ವರ್ಷದಿಂದ ಅವರು ಅನಾರೋಗ್ಯ ಅನುಭವಿಸುತ್ತಿದ್ದರು. ಇದಕ್ಕೆ ಕಾರಣ ಈ ರಾಜ್ಯದಲ್ಲಿ ರಾಜಕೀಯ ದ್ವೇಷದಲ್ಲಿ ನಡೆದಿರುವ ಘಟನೆಗಳು. ಕೆಲವು ತಪ್ಪುಗಳು ಆಗಿರಬಹುದು, ನಾವು ಪರಿಶುದ್ಧವಾಗಿ ಬದುಕಿದ್ದೇವೆ ಎಂದು ಹೇಳಲ್ಲ. ಆ ತಪ್ಪುಗಳನ್ನ ಇಟ್ಟು ಈ ರಾಜ್ಯದಲ್ಲಿ ಏನೇನು ನಡೆದಿದೆ. ನಮ್ಮ ಕುಟುಂಬವನ್ನ ಸಂಪೂರ್ಣವಾಗಿ ರಾಜ್ಯದ ಜನತೆಯ ಹೃದಯದಿಂದ ಕಿತ್ತೊಗೆಯಬೇಕು ಎಂದು ಕೆಲವು ಘಟನೆಗಳು ನಡೆದವು. ಅದನ್ನು ಈ ಸಂದರ್ಭದಲ್ಲಿ ಹೇಳಲು ಹೋಗಲ್ಲ, ಭವಿಷ್ಯ ಅವರು ಇನ್ನೂ ಬದುಕಿರುತ್ತಿದ್ದರು. ಆಸಿಡ್ ಪ್ರಕರಣ, ಮಾನಸಿಕವಾಗಿ ಯಾತನೆಗೆ ಒಳಗಾಗುವ ರೀತಿಯಲ್ಲಿ ಏನೇನು ನಡಿತು. ಎನ್ನುವುದನ್ನು ಮುಂದಿನ ದಿನಗಳಲ್ಲಿ ಯಾರಾದರೂ ಪುಸ್ತಕ ಬರೀತಾರೆ, ಅವರು ಒಂದೂವರೆ ವರ್ಷ ವರ್ಷದಿಂದ ಹಾಸಿಗೆ ಹಿಡಿದಿದ್ದರು. ಅಂದಿನಿಂದ ಹಿಂಸೆ ಪಟ್ಟಿದ್ದಾರೆ, ನೆನಪಿನ ಶಕ್ತಿ ಕಡಿಮೆಯಾಯಿತು. ಯಾರನ್ನೂ ಗುರುತು ಹಿಡಿಯುತ್ತಿರಲಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಯಾರಾದ್ರೂ ಬಂದರೆ ಊಟ ಮಾಡಿದ್ದೀರಾ ಇಲ್ಲವೋ, ಊಟ ಮಾಡಿ ಎನ್ನುತ್ತಿದ್ದರು. ನನ್ನನ್ನ, ಇಬ್ಬರು ತಂಗಿಯರನ್ನು ನೆನಪಿನಲ್ಲಿಟ್ಟುಕೊಂಡಿದ್ದರುಮ ಒಳ್ಳೆಯ ಕೆಲಸ ಮಾಡಪ್ಪ ಎನ್ನುತ್ತಿದ್ದರು. ಆದರೆ ಒಂದೆರಡು ಬಾರಿ, ಕುಟುಂಬದಲ್ಲಿ ನಡೆದಿದ್ದ ಪ್ರಕರಣದಲ್ಲಿ ಯಾವಾಗ ಕರ್ಕಂಡು ಬರುತ್ತಿಯಾ ಎಂಬ ಮಾತು ಹೇಳುತ್ತಿದ್ದರು, ಇವತ್ತು ನನಗೆ ನೋವು ಇದೆ ಎಂದು ಭಾವುಕರಾದರು.

ಧಾರ್ಮಿಕ ಕ್ಷೇತ್ರ ನಿರ್ಮಾಣ
ನಮ್ಮ ತಂದೆಯವರು ಇನ್ನೂ 7-8 ವರ್ಷ ಇರ್ತಾರೆ ಅಂದುಕೊಂಡಿದ್ದೇವೆ. ಆದರೆ ನಮಗೆ ಭಯ ಇರುವುದು ನಮ್ಮ ತಾಯಿಯ ಅವರು ಜೊತೆ ಆತ್ಮೀಯ ಭಾವನೆ ಇಟ್ಟುಕೊಂಡಿದ್ದರು. ಆ ಕೊರಗಿನಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಆಗಬಹುದು ಎನ್ನುವ ಭಯವೂ ಇದೆ. ಆದ್ದರಿಂದ ಅವರ ಜೊತೆ ಯಾರಾದರೂ ಒಬ್ಬರು ಮಾನಸಿಕವಾಗಿ ಧೈರ್ಯ ತುಂಬಲು ಕುಟುಂಬದವರು ಇರಬೇಕು ಎಂದು ತೀರ್ಮಾನ ಮಾಡುತ್ತೇವೆ. ನಮ್ಮ ಕುಟುಂಬದವರು, ನಮ್ಮ ತಂದೆಯವರ ಜೊತೆ ಚರ್ಚೆ ಮಾಡಿ ಈ ಸ್ಥಳವನ್ನು ಧಾರ್ಮಿಕ ಕ್ಷೇತ್ರವಾಗಿ ನಿರ್ಮಾಣ ಮಾಡುತ್ತೇವೆ ಎಂದರು.

ಮ್ಮ ಕುಟುಂಬದ ಸದಸ್ಯರು ಮೂಗು ತೂರಿಸುವ ಪ್ರಶ್ನೆ ಇಲ್ಲ
ಸಾಮಾಜಿಕವಾಗಿ, ಸಂಕಷ್ಟದಲ್ಲಿರುವವರು, ಸಮಸ್ಯೆ ಇರುವವರು ಈ ಸ್ಥಳಕ್ಕೆ ಬಂದು ನೆಮ್ಮದಿಯ ಜೀವನ ನಡೆಸಿ, ಉತ್ತಮವಾಗಿ ಹೊರಗೆ ಹೋಗುವ ರೀತಿಯಲ್ಲಿ ಯಾವ್ಯಾವ ರೀತಿಯ ಕೆಲಸಗಳು ಆಗಬೇಕು. ನಮ್ಮ ಹಳೇಯ ಸಂಸ್ಕೃತಿ ಯಾವ ರೀತಿ ಉಳಿಸಬೇಕು? ವಿಶ್ವಕ್ಕೆ ಮಾದರಿ ಆಗುವ ರೀತಿಯಲ್ಲಿ ಅವರಿಬ್ಬರ ಹೆಸರಿನಲ್ಲಿ ನಿರ್ಮಾಣ ಮಾಡುತ್ತೇವೆ, ನಮಗೆ ಸ್ವಂತಕ್ಕಲ್ಲ. ಇದರಲ್ಲಿ ನಮ್ಮ ಕುಟುಂಬದ ಸದಸ್ಯರು ಮೂಗು ತೂರಿಸುವ ಪ್ರಶ್ನೆ ಇಲ್ಲ. ಪ್ರಾಮಾಣಿಕವಾಗಿ ಜನಸೇವೆ ಮಾಡುವವರನ್ನ ಗುರುತಿಸುತ್ತೇವೆ. ಯಾವುದೇ ರೀತಿಯ ರಾಜಕೀಯ ಸೋಂಕು ಈ ಸ್ಥಳದಲ್ಲಿ ಇರಬಾರದು. ರಾಜಕೀಯ ಮಹತ್ವ ಕೊಡುವ ಪ್ರಶ್ನೆ ಇಲ್ಲ, ನಮ್ಮ ಭಾಗದ ರೈತರನ್ನು ಕರೆಸಿ ಮಾತನಾಡಿದ್ದೇನೆ. ಭೂಮಿಯನ್ನು ಸಂತೋಷವಾಗಿ ಬಿಟ್ಟುಕೊಡಲು ಏನು ನಿರೀಕ್ಷೆ ಮಾಡಿದ್ದರೋ ಅದನ್ನು ಮಾಡಿಕೊಟ್ಟಿದ್ದೇವೆ. ಮುಂದೆಯು ಸಹ ಈ ಜಾಗದಲ್ಲಿ ಕೆಲವು ಕುಟುಂಬಗಳು ಬದುಕಲು ಅವಕಾಶಗಳಿವೆ, ಮುಂದಿನ ದಿನಗಳ ಅವರಿಗೆ ಅನುಕೂಲ ಆಗುತ್ತೆ. ಇದು ನಾಡಿನ ಜನತೆಗೆ ಸಮರ್ಪಣೆ ಮಾಡುವ ಜಾಗ, ಇದರಲ್ಲಿ ನಮ್ಮ ಕುಟುಂಬದ ಹಸ್ತಕ್ಷೇಪ ಇರುವುದಿಲ್ಲ ಎಂದು ತಿಳಿಸಿದರು.

ಅನಾಥರಿಗೆ ನೆರಳಾಗಿರುವಂತೆ ಮಾಡುತ್ತೇವೆ
ವಯೋವೃದ್ದರಿಗೆ, ಅನಾಥ ಮಕ್ಳಳಿಗೆ, ರೈತರು ಸಂಶೋಧನೆ ಮಾಡುವ ಕೇಂದ್ರ ಇಲ್ಲಿ ಆಗುತ್ತೆ. ಸಂಸ್ಕೃತ ಪಾಠಶಾಲೆ ನಿರ್ಮಾಣ ಸೇರಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಸ್ವಾರ್ಥವಿಲ್ಲದೆ ಧಾರ್ಮಿಕವಾಗಿ, ಸಾಮಾಜಿಕವಾಗಿ ಕೆಲಸ ಮಾಡುವವರನ್ನ ಆಯ್ಕೆ ಮಾಡಬೇಕು. ಈ ಭೂಮಿ ಇರುವವರೆಗೂ, ಶಾಶ್ವತವಾಗಿ ನೆಲಸಿ ನಮ್ಮ ತಂದೆ-ತಾಯಿ ಹೆಸರಿನಲ್ಲಿ ಬಡವರು, ಅನಾಥರಿಗೆ ನೆರಳಾಗುವ, ಬದುಕಿಗೆ ದಾರಿ ತೋರಿಸುವ ಯೋಜನೆಗಳನ್ನ ಇಲ್ಲಿ ಮಾಡಲು ನೀಲಿ ನಕ್ಷೆ ತಯಾರು ಮಾಡಿ ಇಟ್ಟಿದ್ದೇನೆ. ನಮ್ಮ ಕುಟುಂಬದ ಸದಸ್ಯರ ಜೊತೆ ಹಂಚಿಕೊಂಡಿದ್ದೇನೆ ಎಲ್ಲರ ಸಹಮತ ಇದೆ, ಮುಂದಿನ 15-20 ದಿನಗಳಲ್ಲಿ ಆರಂಭ ಮಾಡಿ, 2-3 ವರ್ಷಗಳೊಳಗೆ ಆರಂಭ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ ಎಂದು ವಿವರಿಸಿದರು.


Spread the love

About Laxminews 24x7

Check Also

ಇನ್ಮುಂದೆ ಫುಟ್‌ಪಾತ್‌ನಲ್ಲಿ ಬೈಕ್ ಚಲಾಯಿಸಿದ್ರೆ 5,000 ರೂ. ದಂಡ: ಕೃಷ್ಣ ಬೈರೇಗೌಡ

Spread the loveಬೆಂಗಳೂರು: ಪಾದಾಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವವರಿಗೆ ವಿಧಿಸುತ್ತಿದ್ದ ದಂಡದ  ಮೊತ್ತವನ್ನು 5,000 ರೂ.ಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ