Breaking News

ಅಕ್ಕ ಕೆಫೆ ಬೆಳಗಾವಿ ಮಹಾನಗರ ಪಾಲಿಕೆ ಸೇರಿ ಜಿಲ್ಲೆಯ್ಯದ್ಯಂತ ವಿಸ್ತರಣೆಗೆ ಸಿದ್ಧತೆ

Spread the love

ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ, ದುಡಿಯುವ ಮಹಿಳೆಯರ ಕೈಗೆ ಕೆಲಸ ನೀಡುವ ಉದ್ದೇಶದಿಂದ ಆರಂಭಗೊಂಡಿರುವ ‘ಅಕ್ಕ ಕೆಫೆ’ ಬೆಳಗಾವಿ ಮಹಾನಗರ ಪಾಲಿಕೆ ಸೇರಿ ಜಿಲ್ಲೆಯ್ಯದ್ಯಂತ ವಿಸ್ತರಣೆಗೆ ಸರ್ಕಾರ ಮುಂದಾಗಿದೆ.
ಹೌದು.ಮಹಿಳಾ ಸ್ವಸಹಾಯ ಸಂಘಗಳನ್ನು ( ಸಂಜೀವಿನಿ) ಹೋಟೆಲ್ ಉದ್ದಿಮೆಯಲ್ಲಿ ತೊಡಗಿಸಿ ಉತ್ತೇಜಿಸಲು ಮತ್ತು ಆರ್ಥಿಕ ಸ್ವಾವಲಂಬನೆಗೆ ನೆರವಾಗುವ ಉದ್ದೇಶದಿಂದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಮಿಷನ್ (ಎನ್‌ಎಲ್‌ಎಂ)  ಆರಂಭಿಸಿರುವ ಮಹತ್ವಾಕಾಂಕ್ಷೆಯ ಯೋಜನೆ ಅಕ್ಕ ಕೆಫೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಹಿನ್ನೆಲೆ ಬೆಳಗಾವಿ ಮಹಾನಗರ ಪಾಲಿಕೆ, ತಾಲೂಕು  ಪಂಚಾಯತಿ,ತಾಲೂಕು ತಹಸೀಲ್ದಾರ ಕಚೇರಿ, ಕೋರ್ಟ್ ಆವರಣ, ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯ, ಸವದತ್ತಿ ಯಲ್ಲಮ್ಮ ದೇವಸ್ಥಾನ ಹೀಗೆ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಲ್ಲಿ ಅಕ್ಕ ಕೆಫೆ ಆರಂಭಕ್ಕೆ ನಿರ್ಧರಿಸಿದೆ.
ಈಗಾಗಲೇ ರಾಜ್ಯದಲ್ಲಿಯೇ ಮಾದರಿಯಾಗಿರುವ ಬೆಳಗಾವಿ ಜಿಲ್ಲಾ ಪಂಚಾಯತಿ ಆವರಣದ ಅಕ್ಕ ಕೆಫೆಗೆ ಉತ್ತಮ ಸ್ಪಂದನೆ ದೊರಕಿರುವುದರ ಜತೆಗೆ ಮಹಿಳಾ ಸ್ವಸಹಾಯ ಸಂಘ  ನಿತ್ಯ 10ರಿಂದ 15 ಸಾವಿರ ರೂ. ವರೆಗೆ ವಹಿವಾಟು ನಡೆಸುತ್ತಿದೆ. ಜತೆಗೆ 20ಕ್ಕೂ ಅಧಿಕ ಮಹಿಳೆಯರು ಹೋಟೆಲ್ ಉದ್ಯಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಮಹಿಳೆಯರು ಆರ್ಥಿಕ ಸ್ವಾವಲಂವನೆಗೆ ಅಕ್ಕ ಕೆಫೆ ಪ್ರಮುಖ ಪಾತ್ರ ವಹಿಸುತ್ತಿದೆ.
 ಸದ್ಯ ಜಿಲ್ಲೆಯ್ಯದ್ಯಂತ  1200ಕ್ಕೂ ಅಧಿಕ .ಮಹಿಳಾ ಸ್ವಸಹಾಯ ಸಂಘಗಳು ಹಾಲಿನ ಡೈಲಿ, ಉಪ್ಪಿನ ಕಾಯಿ, ಖಡಕ ರೊಟ್ಟಿ, ಚಟ್ನಿ, ಗಾರ್ಮೆಂಟ್ಸ್, ಆಹಾರ ಉದ್ಯಮ ಕ್ಷೇತ್ರ ಸೇರಿ  ವಿವಿಧ ವಲಯದಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅಕ್ಕ ಕೆಫೆ ಮೂಲಕ ಹೋಟೆಲ್ ಉದ್ದಮ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು ಅಕ್ಕ ಕೆಫೆ ದೊಡ್ಡ ಪಾತ್ರ ವಹಿಸಲಿದೆ. ಹೀಗಾಗಿ ಜಿಲ್ಲೆಯ್ಯದ್ಯಂತ  ವಿಸ್ತರಣೆಗೆ ಕ್ರಮ ವಹಿಸಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ