Breaking News

ಮನೆಗೆ ನುಗ್ಗಿ ಯುವತಿಗೆ ಚಾಕು ಇರಿತ – ಮೂವರು ಅರೆಸ್ಟ್, ಪ್ರಮುಖ ಆರೋಪಿಗಳಿಗಾಗಿ ಶೋಧ

Spread the love

ಚಿಕ್ಕಬಳ್ಳಾಪುರ: ಯುವತಿಯೊಬ್ಬಳ ಮನೆಗೆ ನುಗ್ಗಿ ಆಕೆಗೆ ಚಾಕು ಇರಿದಿದ್ದ ಮೂವರು ದುಷ್ಕರ್ಮಿಗಳನ್ನು ಚಿಂತಾಮಣಿ  ನಗರ ಪೊಲೀಸರುಬಂಧಿಸಿದ್ದಾರೆ.

ಲಕ್ಷ್ಮೀ, ಮಂಜುನಾಥ ಹಾಗೂ ಜಬಿವುಲ್ಲಾ ಬಂಧಿತ ಆರೋಪಿಗಳು. ಪ್ರಮುಖ ಆರೋಪಿಗಳಾದ ಕಾರ್ತಿಕ್ ಹಾಗೂ ವಿನೋದ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿ ಮೇಘನಾ ಎಂಬ ಯುವತಿಗೆ ಆರೋಪಿಗಳು ಚುಡಾಯಿಸಿದ್ದರು. ಈ ವೇಳೆ ಸಿಟ್ಟಿಗೆದ್ದ ಯುವತಿ ಆರೋಪಿಗಳ ಕೆನ್ನೆಗೆ ಬಾರಿಸಿದ್ದಳು. ಇದೇ ಕಾರಣಕ್ಕೆ ಆರೋಪಿಗಳು, ಯುವತಿಯ ಮನೆಗೆ ನುಗ್ಗಿ ಚಾಕು ಇರಿದಿದ್ದರು.

ಬಂಧಿತ ಮೂವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Spread the love

About Laxminews 24x7

Check Also

ಮರದ ರೆಂಬೆ ಬಿದ್ದು ಎರಡು ಕಾರುಗಳು ಜಖಂ – ತಪ್ಪಿದ ಭಾರೀ ಅನಾಹುತ

Spread the loveಬೆಂಗಳೂರು: ರಸ್ತೆ ಪಕ್ಕದಲ್ಲಿದ್ದ ಬೃಹತ್‌ ಮರದ ರೆಂಬೆಯೊಂದು ಬಿದ್ದು ಎರಡು ಕಾರು ಹಾಗೂ ಒಂದು ಸ್ಕೂಟಿ ಜಖಂಗೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ