Breaking News

ವೈದ್ಯ ವೃತ್ತಿ ಮಾನವ ಸೇವೆಯ ಶ್ರೇಷ್ಠ ಕ್ಷೇತ್ರ

Spread the love

ಬೆಳಗಾವಿ : ವೈದ್ಯ ವೃತ್ತಿಯು ಕೇವಲ ಉದ್ಯೋಗವಲ್ಲ. ಮಾನವ ಸೇವೆಯ ಶ್ರೇಷ್ಠ ಕ್ಷೇತ್ರ. ಹೀಗಾಗಿ, ಓದುವ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಂಡು ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ನವಜೀವನ ಫೌಂಡೇಶನ್ ಮತ್ತು ಆಸ್ಪತ್ರೆಯ ಎಂಡಿ ಡಾ.ಸತೀಶ ಚೌಲಿಗರ ಹೇಳಿದರು.
ಗುರುದೇವ ಜಂಬಗಿ ಪಿಯು ವಿಜ್ಞಾನ ಕಾಲೇಜಿಯಲ್ಲಿ ಬುಧವಾರ ಜರುಗಿದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಮಾಜದ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಅಮೂಲ್ಯ ಸೇವೆಯನ್ನು ಸ್ಮರಿಸಿದರು.
ಡಾ. ಸರ್ಫರಾಜ ಪಟೇಲ ಮಾತನಾಡಿ, ಆರೋಗ್ಯಕರ ಜೀವನಶೈಲಿ, ಸಮಯೋಚಿತ ಚಿಕಿತ್ಸೆ ಹಾಗೂ ವೈದ್ಯರ ಮೇಲಿನ ನಂಬಿಕೆಯ ಮಹತ್ವವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರವೀಣ ಚಾಂದಿಲ್ಕರ ಮಾತನಾಡಿ, ಸಮಾಜದ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೈದ್ಯರ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ವೈದ್ಯರ ಸೇವಾ ಮನೋಭಾವವನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ವೈದ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಆಡಳಿತಾಧಿಕಾರಿ ಬಸವರಾಜ ತುಬಾಕಿ ನಿರೂಪಿಸಿದರು, ಆಮೀರಾ ಸೇಠ್ ಅತಿಥಿಗಳ ಪರಿಚಯಿಸಿದರು. ಮಹೇಶ ಕಲ್ಲೋಳ್ಳಿ ವಂದಿಸಿದರು.

Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ