Breaking News

ವಿಬಿ-ಜಿ ರಾಮ್ ಜಿ’ ಯೋಜನೆ ಜಾರಿ; ಕೂಲಿ ಮೊತ್ತ ಹೆಚ್ಚಳ: ಜಿಪಂ ಸಿಇಒ ರಾಹುಲ್ ಶಿಂಧೆ

Spread the love

ಬೆಳಗಾವಿ: ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕಾ ಮಿಷನ್ (VB-G RAM G) ಯೋಜನೆಯು ಜುಲೈ-1 ರಿಂದ ಜಾರಿಯಾಗಿದ್ದು, ಈ ಹಿಂದೆ ಕೂಲಿಕಾರರಿಗೆ ನಿಗದಿಪಡಿಸಲಾಗಿದ್ದ ಕೂಲಿ ಮೊತ್ತವನ್ನು ಕೂಡ ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ಒಬ್ಬ ಕೂಲಿಕಾರರಿಗೆ ಪ್ರತಿ ದಿನಕ್ಕೆ ರೂ.370 ಇದ್ದ ಕೂಲಿ ದರವನ್ನು ರೂ.12 ಹೆಚ್ಚಿಸಲಾಗಿದ್ದು, ಜು.1 ರಿಂದ ರೂ.382 ಕೂಲಿ ದರ ನಿಗದಿಪಡಿಸಲಾಗಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಬದಲಾಗಿ ಈಗ 125 ದಿನಗಳವರೆಗೆ ಉದ್ಯೋಗ ನೀಡಲಾಗುವುದು. ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶೇ.99.44 ರಷ್ಟು ಸಕ್ರಿಯ ಕೂಲಿಕಾರರ ಇ-ಕೆವೈಸಿ

ಜಿಲ್ಲೆಯಲ್ಲಿ ಶೇ.99.44 ರಷ್ಟು ಸಕ್ರಿಯ ಕೂಲಿಕಾರರ ಇ-ಕೆವೈಸಿಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದೇ ರೀತಿ ಶೇ.89.78 ರಷ್ಟು ನೋಂದಾಯಿತ ಎಲ್ಲ ಕೂಲಿಕಾರರ ಇ-ಕೆವೈಸಿಯನ್ನು ಕೂಡ ಕೈಗೊಳ್ಳಲಾಗಿದೆ. ವಲಸೆ ಹಾಗೂ ತಾಂತ್ರಿಕ ಕಾರಣದಿಂದ ಕೆಲವು ಕೂಲಿಕಾರರ ಇ-ಕೆವೈಸಿ ಬಾಕಿ ಇದ್ದು, ಅದಕ್ಕೂ ಕ್ರಮವಹಿಸಲಾಗುತ್ತಿದೆ. ಇದರಿಂದ ಕೂಲಿಕಾರರ ಎನ್.ಎಮ್.ಎಮ್.ಎಸ್. ಹಾಜರಾತಿಯಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ ಕಂಡುಬರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಬರ ಪರಿಸ್ಥಿತಿ ಗಂಭೀರವಾಗ್ತಿದೆ, ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ – ರೈತರಿಗೆ ಡಿಕೆಶಿ ಮನವಿ

Spread the loveಬೆಂಗಳೂರು: ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗ್ತಿದೆ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿನ ಒಳಹರಿವು ಶೂನ್ಯಕ್ಕೆ ತಲುಪಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ