Breaking News

ಮತದಾರರ ಪಟ್ಟಿಯಲ್ಲಿ 2002ರ ದಾಖಲೆ ಸಿಗದಿದ್ದರೆ ಬೇಡ ಆತಂಕ: ಪರ್ಯಾಯ ಮಾರ್ಗ ತಿಳಿಸಿದ ಚುನಾವಣಾ ಆಯೋಗ

Spread the love

ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ  ವೇಳೆ ಗಣತಿ ನಮೂನೆ ಭರ್ತಿ ಮಾಡಲು 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹಾಗೂ ಪೋಷಕರ ಹೆಸರುಗಳು ಸಿಗುತ್ತಿಲ್ಲ ಎಂದು ಕರ್ನಾಟಕದ ಹಲವಾರು ಮತದಾರರು ದೂರು ನೀಡಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಸ್ಪಷ್ಟನೆ ನೀಡಿದೆ. ನಿಮ್ಮ ಅಥವಾ ನಿಮ್ಮ ಆಪ್ತ ಕುಟುಂಬ ಸದಸ್ಯರ ಹೆಸರು 2002ರ ಎಸ್‌ಐಆರ್ ಪಟ್ಟಿಯಲ್ಲಿ ಇಲ್ಲದಿದ್ದರೆ, ಸಂತತಿ ಅಥವಾ ಸಂಬಂಧಿಕರ  ಮ್ಯಾಪಿಂಗ್ ಆಯ್ಕೆ ಮಾಡಬಹುದು. ಇಲ್ಲವೇ, ಕ್ಲೈಮ್ಸ್ ಅಂಡ್ ಆಬ್ಜೆಕ್ಷನ್ಸ್ ಅವಧಿಯಲ್ಲಿ ಫಾರ್ಮ್-6 ಸಲ್ಲಿಸಿ ಹೊಸ ಮತದಾರರಾಗಿ ನೋಂದಣಿ ಮಾಡಿಸಬಹುದು ಎಂದು ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ್ ತಿಳಿಸಿದ್ದಾರೆ.

ಸಂಬಂಧಿಕರ ಹೆಸರು ಮ್ಯಾಪ್ ಮಾಡಬಹುದು

2025ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ 2002ರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, 2002ರ ಪಟ್ಟಿಯಲ್ಲಿ ಹೆಸರು ಹೊಂದಿರುವ ಸಂಬಂಧಿಕರ ವಿವರವನ್ನು ನಮೂದಿಸಬೇಕು. 2002ರ ಮತದಾರರ ಪಟ್ಟಿಯನ್ನು https://voters.eci.gov.in ಮೂಲಕ ಪರಿಶೀಲಿಸಬಹುದು. ಪೋಷಕರ ಹೆಸರು 2002ರ ಪಟ್ಟಿಯಲ್ಲಿ ಇಲ್ಲದಿದ್ದರೂ ಆತಂಕಪಡುವ ಅಗತ್ಯವಿಲ್ಲ. ಪೋಷಕರ ಸಹೋದರ-ಸಹೋದರಿಯರು ಸೇರಿದಂತೆ ತಂದೆ ಅಥವಾ ತಾಯಿಯ ಕಡೆಯ ಯಾವುದೇ ಸಂಬಂಧಿಕರ ಹೆಸರನ್ನು ಮ್ಯಾಪ್ ಮಾಡಬಹುದು. ಆ ಸಂಬಂಧಿಕರು ಭಾರತದ ಯಾವುದೇ ಭಾಗದಲ್ಲಿ ಮತದಾರರಾಗಿದ್ದರೂ, ಕೇಂದ್ರಿಕೃತ ಪೋರ್ಟಲ್ ಮೂಲಕ ಬಿಎಲ್‌ಒ (BLO) ಪರಿಶೀಲನೆ ನಡೆಸಬಹುದು ಎಂದು ಯೋಗೇಶ್ವರ್ ತಿಳಿಸಿದ್ದಾರೆ.

ಹೊಸ ಮತದಾರ ಎಂದು ಪರಿಗಣನೆ

ಈ ಸಂಬಂಧವನ್ನು ಸಾಬೀತುಪಡಿಸಲು ಎಣಿಕೆ ನಮೂನೆಯೊಂದಿಗೆ ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ಆದರೆ, ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಪರಿಶೀಲನೆಗಾಗಿ ನೋಟಿಸ್ ಬಂದರೆ ಮಾತ್ರ, ಚುನಾವಣಾ ಆಯೋಗ ಅನುಮೋದಿಸಿರುವ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗುತ್ತದೆ.ಇನ್ನು, 2002ರ ಪಟ್ಟಿಯಲ್ಲಿ ಯಾವುದೇ ಸಂಬಂಧಿಕರ ಹೆಸರೂ ಇಲ್ಲದಿದ್ದರೆ, ಅಂತಹ ವ್ಯಕ್ತಿಯನ್ನು ಹೊಸ ಮತದಾರ ಎಂದು ಪರಿಗಣಿಸಲಾಗುತ್ತದೆ. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ನಡೆಯುವ ‘ಕ್ಲೈಮ್ಸ್ ಅಂಡ್ ಆಬ್ಜೆಕ್ಷನ್ಸ್’ ಅವಧಿಯಲ್ಲಿ, ಫಾರ್ಮ್-6, ಕಡ್ಡಾಯ ಘೋಷಣಾ ಪತ್ರ ಹಾಗೂ ಚುನಾವಣಾ ಆಯೋಗ ಅನುಮೋದಿಸಿರುವ 12 ದಾಖಲೆಗಳಲ್ಲಿ ಒಂದನ್ನು ಸಲ್ಲಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.


Spread the love

About Laxminews 24x7

Check Also

ಉಗಾಂಡದಲ್ಲಿ ಕೊಟ್ಟೂರು ಮಹಿಳೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್‌

Spread the loveಬಳ್ಳಾರಿ: ಪತಿಯ ಜೊತೆ ಉಗಾಂಡ ದೇಶದಲ್ಲಿ ನೆಲೆಸಿದ್ದ ಕರ್ನಾಟಕ ವಿಜಯನಗರ  ಜಿಲ್ಲೆಯ ಕೊಟ್ಟೂರು ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ