Breaking News

ಆಯುರ್ವೇದ ಆರೋಗ್ಯ ಸೇವೆ ಮೂಲಕ ಸಮಾಜ ಸೇವೆ

Spread the love

ಬೆಳಗಾವಿ: ಆಯುರ್ವೇದ ಆರೋಗ್ಯ ಸೇವೆ ಮೂಲಕ ಸಮಾಜ ಸೇವೆ ಸಲ್ಲಿಸುವಾಗ ಕರುಣೆ, ನೈತಿಕತೆ ಹಾಗೂ ಶ್ರೇಷ್ಠತೆಯ ಮೌಲ್ಯಗಳನ್ನು ಪಾಲಿಸಬೇಕು ಎಂದು ನವದೆಹಲಿಯ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪದ್ಧತಿ ಆಯೋಗದ ಆಯುರ್ವೇದ ಮಂಡಳಿ ಅಧ್ಯಕ್ಷ ಡಾ.ಅಲ್ಲಮಪ್ರಭು ಗುಡ್ಡ ಹೇಳಿದರು.

ನಗರದ ಡಿಬಿಎಇಟಿ ಸಂಸ್ಥೆಯ ಎಸ್‌ಬಿಜಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕಲಿಕೆಗೆ ಕೊನೆಯಿಲ್ಲ. ಹೀಗಾಗಿ, ಪದವಿ ಮುಗಿಸಿದರೂ ಅಧ್ಯಯನ ಬಿಡಬಾರದು ಎಂದರು.
ಪದವೀಧರರ ಪ್ರಮಾಣವಚನ ಸ್ವೀಕಾರ, ಶೈಕ್ಷಣಿಕ ಮೆರವಣಿಗೆ, ಪದವಿ ಹಾಗೂ ಪದಕಗಳ ವಿತರಣೆಯು ನೆರವೇರಿತು.
ಎಸ್‌ಬಿಜಿ ಸಮೂಹದ ಅಧ್ಯಕ್ಷ, ಮಾಜಿ ಶಾಸಕ ಎಸ್.ಬಿ.ಘಾಟಗೆ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ವಿಶ್ವವಿದ್ಯಾಲಯದ ಐಎಂಸಿಎಸ್‌ಆರ್ ನಿರ್ದೇಶಕ ಡಾ.ಬಿ.ಎಸ್.ಪ್ರಸಾದ, ಹುಬ್ಬಳ್ಳಿಯ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ ಬಣ್ಣಿಗೋಳ, ಅಂಕಲಿಯ ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎನ್.ಎ.ಮಗದುಮ್ಮ, ಆಸ್ಪತ್ರೆಯ ಅಧ್ಯಕ್ಷ ಅಮಿತ ಘಾಟಗೆ, ವ್ಯವಸ್ಥಾಪಕ ನಿರ್ದೇಶಕಿ ಡಾ.ಮಾನಸಿ ಘಾಟಗೆ, ವೈದ್ಯಕೀಯ ನಿರ್ದೇಶಕ ಡಾ. ಆದಿವೇಶ ಅರಕೇರಿ ಇತರರಿದ್ದರು.

Spread the love

About Laxminews 24x7

Check Also

30 ದಿನ ಜೈಲಿಗೆ ಹೋದರೆ ಪ್ರಧಾನಿ, ಸಿಎಂ, ಸಚಿವರು ವಜಾ – ಮಸೂದೆಗೆ ಸಿದ್ಧತೆ

Spread the loveನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ