Breaking News

ಚಿಕ್ಕೋಡಿಯಲ್ಲಿ ವೈದ್ಯರ ದಿನ ಆಚರಣೆ

Spread the love

ಚಿಕ್ಕೋಡಿ: ಜನರ ವೈದ್ಯರ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ ಬಂದ ರೋಗಿಗಳನ್ನು ತಾಯಿಯಂತೆ ಮಮತೆಯಿಂದ ಮತ್ತು ಭರವಸೆಯ ನುಡಿಗಳನ್ನು ಜನರ ಆಶೋತ್ತರಗಳಿಗೆ ಪ್ರತಿಕ್ರಿಯಿಸಿ ಗುಣಮಟ್ಟದ ಚಿಕಿತ್ಸೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕೆಎಲ್‌ಇಆಸ್ಪತ್ರೆಯ ಸ್ಯ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ವೈದ್ಯ ಡಾ.ಅರವಿಂದ ಮಿಣಚೆ ಅಭಿಪ್ರಾಯಪಟ್ಟರು. ಪಟ್ಟಣದ ಕೆಎಲ್‌ಇ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ವೈದ್ಯನು ಸದಾ ಜಾಗೃತನಾದರೂ . ಅವನು ಮಾಡಬಹುದಾದ ಒಂದು ಸಣ್ಣತಪ್ಪು ಒಂದು ಜೀವಕ್ಕೆ ಕುತ್ತಾಗಬಹುದು. ಹೀಗಾಗಿ ಪ್ರತಿಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕು.ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅನೇಕ ಜೀವಗಳನ್ನು ಉಳಿಸಿದ್ದನ್ನು ನಾವೆಲ್ಲ ನೋಡಿದ್ದೆವೆ. ಇದು ಯಾವುದೇ ಕಠಿಣ ಸಂದರ್ಭಕ್ಕಾಗಿ ಜನರ ಪ್ರಾಣರಕ್ಷಣೆಗೆ ವೈದ್ಯ ಸಮೂಹ ನಿಲ್ಲುತ್ತದೆ ಎಂದು ಹೇಳಿದರು.
ಅದ್ಯಕ್ಷತೆ ವಹಿಸಿದ್ದ ಕೆ ಎಲ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಕಿರಣ ಮುತ್ನಾಳಿ ಮಾತನಾಡಿ ವೈದ್ಯೋ ನಾರಾಯಣೋ ಹರಿ ಎಂಬ ಉಕ್ತಿಯ ಮೂಲಕ ವೈದ್ಯರಲ್ಲಿ
ದೇವರನ್ನು ಕಾಣುವ ಪರಂಪರೆ ನಮ್ಮದು. ವೈದ್ಯರ ಪಾತ್ರ ಹಾಗೂ ನಿಸ್ವಾರ್ಥ ಭಾವದಿಂದ ನೀಡುವ ಆಹಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಆಗುವ ಬದಲಾವಣೆಗಳ ಕುರಿತು ಅಧ್ಯಯನ ಮಾಡಿದ್ದು ಮುಂದೆ ಸಮಾಜದಲ್ಲಿ ವೈದ್ಯಕೀಯ ವೈದ್ಯರಾಗುವಿರಿ ಎಂದು ಹೇಳಿದರು ಸೇರಿಸಲಾಗಿದೆ.
ಇದೆ ವೇಳೆ ಆಯುರ್ವೇದ ಕಾಲೇಜಿನಲ್ಲಿ ಹೆಚ್ಚು ಸೇವೆ ಸಲ್ಲಿಸಿದ ಡಾ.ಬಿ ಬಿ ದೇಸಾಯಿ, ಡಾ. ಸೂರಜ ಕುಂಬಾರ, ಡಾ.ಬಾಹುಬಲಿ ಮಹಾಜನ ಅವರನ್ನು ಸತ್ಕರಿಸಲಾಯಿತು.
ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ, ಉಪನ್ಯಾಸಕ ಡಾ.ಶ್ರೀಧರ ಲಕ್ಕುಂಡಿ, ಡಾ.ಸುಜಾತಾ ಬರಮೋಜಿ, ಡಾ.ರವಿ ಮಡಿವಾಳರ ಇತರರು ಇದ್ದರು.


Spread the love

About Laxminews 24x7

Check Also

30 ದಿನ ಜೈಲಿಗೆ ಹೋದರೆ ಪ್ರಧಾನಿ, ಸಿಎಂ, ಸಚಿವರು ವಜಾ – ಮಸೂದೆಗೆ ಸಿದ್ಧತೆ

Spread the loveನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ