Breaking News

ಗ್ರಾಮ‌ ಸಹಾಯಕರಿಗೆ ವೇತನ ಹೆಚ್ಚಳ, ಇಡಿಗಂಟು ಯಥಾವತ್ತಾಗಿ ಜಾರಿಗೊಳಿಸುವಂತೆ ಡಿಸಿಎಂಗೆ ಮನವಿ

Spread the love

ಬೆಳಗಾವಿ: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಸು.10450 ಗ್ರಾಮ‌ ಸಹಾಯಕರಿಗೆ ಕಳೆದ ಸೆ.25 , 2025 ರಲ್ಲಿ ಜರುಗಿದ ಸಚಿವ ಸಂಪುಟದಲ್ಲಿ ನಿರ್ಣಯಿಸಿದ ಗ್ರಾಮ ಸಹಾಯಕರಿಗೆ  “ಡಿ” ಗ್ರೂಪ್ ಅಥವಾ 27000 ಸಾವಿರ ವೇತನ ಹೆಚ್ಚಳ, ಇಡಿಗಂಟು ಇವುಗಳನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಬೆಳಗಾವಿ ಜಿಲ್ಲಾ ಗ್ರಾಮ‌ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ ನೇತೃತ್ವದಲ್ಲಿ ಬುಧವಾರ ಸುವರ್ಣ ಸೌಧದಲ್ಲಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ, ವೇತನ “ಡಿ” ಗ್ರೂಪ್ ಅಥವಾ ವೇತನ 27000 ಹೆಚ್ಚಿಸುವ ಕುರಿತು ಅಧಿಕೃತ ಆದೇಶವಾಗಿಲ್ಲ. ಸಚಿವ ಸಂಪುಟದ ನಿರ್ಣಯದಂತೆ ಅಧಿಕೃತ ಆದೇಶವಾಗಬೇಕು. ಜತೆಗೆ ಸೇವೆಯಿಂದ ನಿವೃತ್ತಿ ಹೊಂದಿದ ಗ್ರಾಮ ಸಹಾಯಕರಿಗೆ ರೂ.5 ಲಕ್ಷ  ಇಡಿಗಂಟು ಆದೇಶವಾಗಿದ್ದು, ಅಧಿಕೃತ ಸುತ್ತೋಲೆ ಹಣಕಾಸಿನ ಇಲಾಖೆಯಿಂದ ಜಾರಿಯಾಗಿರುವುದಿಲ್ಲ ಕೂಡಲೇ ಸರಕಾರ ಗ್ರಾಮ ಸಹಾಯಕರ 48 ವರ್ಷಗಳ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.


Spread the love

About Laxminews 24x7

Check Also

ತಡವಾಗಿ ಹೋಗಿದ್ದೇ ಹಿಂದಿನ ಸಾಲಲ್ಲಿ ಕೂರಲು ಕಾರಣ: ಸಿದ್ದರಾಮಯ್ಯ ಸ್ಪಷ್ಟನೆ

Spread the loveಬೆಂಗಳೂರು: ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿಯವರ  ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ