Breaking News

ಹೆಂಡತಿ ಜಗಳವಾಡಿ ತವರಿಗೆ ಹೋಗಿದ್ದಕ್ಕೆ ಮೊಬೈಲ್ ಟವರ್ ಏರಿ ಕುಳಿತ ಪತಿ

Spread the love

ಗದಗ: ಗಂಡ-ಹೆಂಡತಿ ಜಗಳ ಕೆಲವೊಮ್ಮೆ ದೊಡ್ಡ ಅವಾಂತರಕ್ಕೂ ಕಾರಣವಾಗುತ್ತದೆ. ಗದಗ  ಜಿಲ್ಲೆಯಲ್ಲಿ ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಕುಳಿತ ಘಟನೆ ನಡೆದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಜೀರ್ ಸಾಬ್ ಟವರ್ ಏರಿದ ವ್ಯಕ್ತಿ. ನಜೀರ್ ಸಾಬ್ ಮತ್ತು ಅವರ ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಬಾರಿಯೂ ಜಗಳವಾದ ಬಳಿಕ ಪತ್ನಿ ತವರು ಮನೆಗೆ ಹೋಗಿದ್ದಳು.

ಪತ್ನಿಯನ್ನು ಕರೆದುಕೊಂಡು ಬರಲು ನಜೀರ್ ಸಾಬ್ ತವರು ಮನೆಗೆ ತೆರಳಿದ್ದ. ಆದರೆ ಅಲ್ಲಿ ಮನೆಯವರು ಅವನನ್ನು ಬೈದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಮನನೊಂದ ನಜೀರ್ ಸಾಬ್, ಮದ್ಯದ ಅಮಲಿನಲ್ಲೇ ಗ್ರಾಮದ ಮೊಬೈಲ್ ಟವರ್ ಏರಿದ್ದಾನೆ. ನನ್ನ ಪತ್ನಿಯನ್ನು ತವರು ಮನೆಯಿಂದ ಕರೆದುಕೊಂಡು ಬರುವವರೆಗೆ ನಾನು ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮಸ್ಥರ ಸಹಾಯದಿಂದ ನಜೀರ್ ಸಾಬ್ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಸಾಕಷ್ಟು ಸಮಯದ ಮನವೊಲಿಕೆಯ ಬಳಿಕ ನಜೀರ್ ಸಾಬ್ ಟವರ್‌ನಿಂದ ಸುರಕ್ಷಿತವಾಗಿ ಕೆಳಗೆ ಇಳಿದ. ಬಳಿಕ ಆತನನ್ನು ಮುಂಡರಗಿ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು, ಗಂಡ-ಹೆಂಡತಿ ಜಗಳವನ್ನು ಬೀದಿರಂಪ ಮಾಡಬಾರದು ಎಂದು ತಿಳಿವಳಿಕೆ ನೀಡಿ ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ. ಘಟನೆ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ


Spread the love

About Laxminews 24x7

Check Also

ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್‌

Spread the loveಬೆಂಗಳೂರು: ಪತಿಗಿಂತ  ಹೆಚ್ಚು ದುಡಿಯುವ ಪತ್ನಿಗೆ  ಜೀವನಾಂಶ ನೀಡಬೇಕಿಲ್ಲ ಎಂದು ನ್ಯಾ. ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ