Breaking News

ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Spread the love

ಬಾಗಲಕೋಟೆ ವಿಶ್ವವಿದ್ಯಾಲಯ ಡಿಸೆಂಬರ್ ಮತ್ತು ಜನೆವರಿಯಲ್ಲಿ ನಡೆಸಿದ 6ನೇಯ ಸೆಮಿಸ್ಟರ್ ಪರೀಕ್ಷೆ ಯಲ್ಲಿ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದು ಗಂಗಾ ಅಮಾತೆಪ್ಪನವರ ಜಾಹಿರಾತು ಮತ್ತು ಸಾಂಸ್ಥಿಕ ಸಂವಹನ ವಿಷಯಕ್ಕೆ 100ಕ್ಕೆ 100 ಮತ್ತು ಡಿಜಿಟಲ್ ಮಾಧ್ಯಮದ ಪರಿಚಯ ಪತ್ರಿಕೆಗೆ 98 ಅಂಕ‌ ಪಡೆದರೆ, ಶಾಂತಾ ಪಾಟೀಲ ಪ್ರಥಮ‌ ಪತ್ರಿಕೆಗೆ 80, ದ್ವಿತೀಯ ಪತ್ರಿಕೆಗೆ 89 ಹಾಗ ದೀಪಾ ಮುರನಾಳ‌ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ವಿಷಯಗಳಿಗೆ 75,84 ಅಂಕಗಳನ್ನು ಪಡೆದ್ದಿದ್ದಾರೆ. ಅಲ್ಲದೆ ಪರೀಕ್ಷೆಗೆ ಹಾಜರಾದ 11 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ‌ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಮಹೇಶ್.ಎನ್.ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಭಾವಿ, ಪ್ರಾಚಾರ್ಯರಾದ ಎಸ್. ಆರ್. ಮುಗನೂರಮಠ, ವಿಭಾಗದ ಮುಖ್ಯಸ್ಥರಾದ ಆಯ್. ಬಿ.ಚಿಕ್ಕಮಠ, ಪ್ರಾಧ್ಯಾಪಕರಾದ ಎಮ್.ಪಿ.ದೊಡವಾಡ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ


Spread the love

About Laxminews 24x7

Check Also

80ನೇ ಸ್ವಾತಂತ್ರ‍್ಯ ದಿನಾಚರಣೆ – ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆಶಿ

Spread the loveಬೆಂಗಳೂರು: ಇಂದು ದೇಶದೆಲ್ಲೆಡೆ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮ. ಇದರ ಅಂಗವಾಗಿ ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ