Breaking News

ತುರಮುರಿ ಕಸ ವಿಲೇವಾರಿ ಘಟಕ ತೆರವುಗೊಳಿಸಲು ಆಗ್ರಹ

Spread the love

ಬೆಳಗಾವಿ : ತುರಮುರಿ ಕಸ ವಿಲೇವಾರಿ ಘಟಕ ತೆರವುಗೊಳಿಸುವ ಕುರಿತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಹತ್ತು ಗ್ರಾಮಗಳವರು ಜು.1ರ ಗಡುವು ನೀಡಿದ್ದಾರೆ. ಶುಕ್ರವಾರ ಗ್ರಾಮಗಳ ಪ್ರಮುಖರು ಈ ಸಂಬಂಧದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದಲ್ಲಿ. ಜು.1ರ ನಂತರ ಇಲ್ಲಿ ಕಸ ತಂದು ಸುರಿಯುವುದನ್ನೇ ತಡೆಯುವ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಏಪ್ರಿಲ್ 10ರಂದು ಮನವಿ ಕೊಟ್ಟಾಗ, 60 ದಿನದೊಳಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಈ ಅವಧಿ ಮುಗಿದು ಹೋದರೂ ಯಾವುದೇ ಕ್ರಮವಾಗಿಲ್ಲ. ಈಗಾಗಲೇ ಶಾಲೆಗಳು ಆರಂಭಗೊಂಡಿದ್ದರಿಂದ ನಮ್ಮ ಮಕ್ಕಳು ಪುನಃ ಅದೇ ಸಮಸ್ಯೆ ಎದುರಿಸುತ್ತಿದ್ದಾರೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಆರೋಗ್ಯದ ಮೇಲೆ ಈ ಘಟಕದಿಂದ ದುಷ್ಪರಿಣಾಮ ಬೀರುತ್ತಿದ್ದು, ಇದರಿಂದ ಶಾಶ್ವತವಾಗಿ ಮುಕ್ತಿ ಕೊಡಿಸಿ ಎಂದು ಒತ್ತಾಯಿಸಿದರು.
ಈ ಕಸ ವಿಲೇವಾರಿ ಘಟದ ದುರ್ವಾಸನೆ ಗಾಳಿಯಲ್ಲಿ ಸೇರಿ ವಾತಾವರಣವೂ ಹದಗೆಟ್ಟಿದೆ. ಜಲಮೂಲಗಳು ಕಲುಷಿತವಾಗಿವೆ. ಅಕ್ಷರಷಃ ಈ ಘಟಕವು ಸುತ್ತಮುತ್ತಲಿನ ಗ್ರಾಮಸ್ಥರನ್ನು ನಿಧಾನ ಗತಿಯ ವಿಷವಾಗಿ ಆವರಿಸಿಕೊಳ್ಳುತ್ತಿದೆ. ಆರೋಗ್ಯ, ಗ್ರಾಮದ ಘನತೆಯೂ ಹಾಳಾಗಿ ಹೋಗುತ್ತಿದ್ದು, ಶೀಘ್ರವೇ ಈ ಘಟಕೆ ತೆರವುಗೊಳಿಸಬೇಕು. ಇಲ್ಲದೇ ಹೋದಲ್ಲಿ ಕಸ ತಂದು ಸುರಿಯುವುದನ್ನೇ ತಡೆಯುವ ಮೂಲಕ ಉಗ್ರ ಹೋರಾಟ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಾಗರಾಜ ಜಾಧವ, ಬಿ.ಕೆ.ಅಷ್ಟೇಕರ, ಸುಹಾಸ ಜಾಧವ, ಡಿ.ಎಂ.ಬೆಳಗಾಂವಕರ ಹಾಗೂ ತುರಮುರಿ, ಉಚಗಾವಿ, ಕೋನೆವಾಡಿ, ಬಾಚಿ, ಬಸುರ್ತೆ, ಕಲ್ಲೆಹೋಳ, ಸುಳಗಾ, ಗೋಜಗಾ, ಮನ್ನೂರ ಮತ್ತು ಹಿಂಡಗಲಾ ಗ್ರಾಮದ ಪ್ರತಿನಿಧಿಗಳಿದ್ದರು.

Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ