Breaking News

ಕಾಂಗ್ರೆಸ್​ 5, ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು! ಜೆಡಿಎಸ್​ಗೆ ಮುಖಭಂಗ

Spread the love

ಬೆಂಗಳೂರು: ವಿಧಾನ ಪರಿಷತ್‌ನ 7 ಸ್ಥಾನಗಳಿಗಾಗಿ ನಡೆದ ಮತದಾನದ ಫಲಿತಾಂಶ ಇಂದು ಸಂಜೆ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್​ ಮೇಲುಗೈ ಸಾಧಿಸಿದೆ. 32 ಮತಗಳಿಂದ ಗೆದ್ದ ವಿನಯ್​ ಕಾರ್ತಿಕ್​, ಅತಿ ಹೆಚ್ಚು ಮತಗಳನ್ನು ಗಳಿಸಿ ‘ಕೈ’ ಗೆಲುವಿಗೆ ಸಾಕ್ಷಿಯಾಗಿದ್ದಾರೆ.

6 ಜೆಡಿಎಸ್​, 3 ಬಿಜೆಪಿ ಶಾಸಕರಿಂದ ಅಡ್ಡ ಮತದಾನ!

ಏಳನೇ ಸ್ಥಾನದ ಈ ರೋಚಕ ಕದನದಲ್ಲಿ ಕಾಂಗ್ರೆಸ್‌ನ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್‌ನ ಗೋವಿಂದರಾಜು ನಡುವೆ ಪೈಪೋಟಿ ಇತ್ತು, ಇಬ್ಬರಿಗೂ ಮ್ಯಾಜಿಕ್ ನಂಬರ್ 28 ತಲುಪಲು ಸ್ವಪಕ್ಷೀಯ ಮತಗಳ ಕೊರತೆ ಕಾಡುತ್ತಿತ್ತು. ಹೀಗಾಗಿ 3 ಪಕ್ಷೇತರರು, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ 3 ಶಾಸಕರು ಹಾಗೂ ಈಗಷ್ಟೇ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಜನಾರ್ದನ ರೆಡ್ಡಿ ಅವರ ಮತಗಳು ಇಲ್ಲಿ ನಿರ್ಣಾಯಕ ಗೇಮ್ ಚೇಂಜರ್ ಆಗಲಿವೆ ಎಂಬ ನಿರೀಕ್ಷೆಗಳು ಮೂಡಿತ್ತು. ಶಿವರಾಮ್ ಹೆಬ್ಬಾರ್​ ಮತ್ತು ಎಸ್​ಟಿ ಸೋಮಶೇಖರ್​ ಇಬ್ಬರನ್ನೂ ಹೊರತುಪಡಿಸಿ, ಒಟ್ಟು ಜೆಡಿಎಸ್​ನ ಏಳು ಮತ್ತು ಬಿಜೆಪಿಯ ಮೂವರು ಶಾಸಕರಿಂದ ಅಡ್ಡ ಮತದಾನ ನಡೆದಿದ್ದೇ ಸದ್ಯ ಕಾಂಗ್ರೆಸ್​ ಗೆಲುವಿಗೆ ಕಾರಣವಾಗಿದೆ.

ಪರಿಷತ್​ ಚುನಾವಣೆಯಲ್ಲಿ ಕೈಗೆ 11 ಹೆಚ್ಚುವರಿ ಮತ

ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಒಟ್ಟು 11 ಹೆಚ್ಚುವರಿ ಮತಗಳು ಲಭಿಸಿದ್ದು, ಬಿಜೆಪಿ ಮತ್ತು ಜೆಡಿಎಸ್​ ಶಾಸಕರು ಮಾಡಿದ ಕ್ರಾಸ್​ ವೋಟಿಂಗ್​ ದೊಡ್ಡ ಗೆಲುವಿಗೆ ಕಾರಣವಾಗಿದೆ. ಕಡೆಗೂ ಸಿಎಂ ಡಿಕೆ ಶಿವಕುಮಾರ್​ ಅವರ ಗೆಲುವಿನ ಲೆಕ್ಕಾಚಾರ ವರ್ಕ್​ಔಟ್​ ಆಗಿದೆ.

ಯಾರಿಗೆ ಎಷ್ಟು ಮತ?

ಕಾಂಗ್ರೆಸ್​

1. ಬಿ.ಕೆ. ಹರಿಪ್ರಸಾದ್ – 30 ಮತ
2. ಪಿವಿ ಮೋಹನ್ – 29 ಮತ
3. ಬಿಎಸ್​ ಶಿವಣ್ಣ- 30 ಮತ
4. ತಿಪ್ಪಣಪ್ಪ ಕಮಕನೂರ- 30 ಮತ
5. ವಿನಯ್ ಕಾರ್ತಿಕ್ – 32 ಮತ

ಬಿಜೆಪಿ

1. ರಘು ಕೌಟಿಲ್ಯ- 29 ಮತ
2. ಲಿಂಗರಾಜ ಪಾಟೀಲ್ – 27 ಮತ

ಜೆಡಿಎಸ್​

1. ಗೋವಿಂದರಾಜು – 14 ಮತ

ಲಿಂಗರಾಜ್​ ಪಾಟೀಲ್​ಗೆ ಕೊನೆ ಕ್ಷಣದಲ್ಲಿ ಗೆಲುವು

​ಪ್ರತಿ ಅಭ್ಯರ್ಥಿ ಗೆಲ್ಲಲು 27.65 ಮತಗಳು ಅವಶ್ಯ. ಲಿಂಗರಾಜ್ ಪಾಟೀಲ್​ಗೆ ಸಿಕ್ಕಿದ್ದು 27 ಮತಗಳು. ಆದರೆ. ಕೊನೆಯ ಎಲಿಮಿನೇಷನ್ ಸುತ್ತಿನಲ್ಲಿ ಜೆಡಿಎಸ್​ನ ಗೋವಿಂದರಾಜುಗೆ 14 ಮತಗಳ ದೊರೆತ ಹಿನ್ನೆಲೆ ಗೆಲುವು ಲಿಂಗರಾಜ್​ ಪಾಲಾಯಿತು.ಇದು ಗೆಲುವಿನ ಲೆಕ್ಕಾಚಾರವನ್ನು ಬದಲಿಸಿತು.

ದಾಖಲೆಯ ಮತದಾನ

ವಿಧಾನಸೌಧದಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ರಾಜ್ಯದ ಶಾಸಕರು ಉತ್ಸಾಹದಿಂದ ಭಾಗವಹಿಸಿದ್ದು, ಸಂಜೆ 4 ರವರೆಗೆ ಗಡುವು ಇದ್ದರೂ ಸಹ ಮಧ್ಯಾಹ್ನ 2 ಗಂಟೆಯ ವೇಳೆಗೆ ಒಟ್ಟು 222 ಶಾಸಕರು ತಮ್ಮ ಹಕ್ಕನ್ನು ಚಲಾಯಿಸಿದರು. ಇದರೊಂದಿಗೆ ಮಧ್ಯಾಹ್ನದ ಹೊತ್ತಿಗೇ ನೂರಕ್ಕೆ ನೂರರಷ್ಟು (ಶೇ. 100) ದಾಖಲೆಯ ಮತದಾನ ದಾಖಲಾಯಿತು. ಇನ್ನು ಮತ ಎಣಿಕೆಯ ವೇಳೆ ಗುರುತು ಸರಿಯಾಗಿ ಮಾಡದ ಹಿನ್ನೆಲೆ ಒಂದು ಮತವನ್ನು ಅಸಿಂಧು ಎಂದು ಪರಿಗಣಿಸಲಾಯಿತು.

Spread the love

About Laxminews 24x7

Check Also

ರೈತರಿಗೆ ಜಮೀನುಗಳಿಗೆ ತೆರಳಲು ಸಮರ್ಪಕ ರಸ್ತೆ ಸೌಲಭ್ಯ ಕಲ್ಪಿಸಿ

Spread the loveಸವದತ್ತಿ: ಚುಳಕಿ ಗ್ರಾಮದ ರೈತರಿಗೆ ಜಮೀನುಗಳಿಗೆ ತೆರಳಲು ಸಮರ್ಪಕ ರಸ್ತೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ರೈತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ