Breaking News

ರಾಜ್ಯಸಭೆ ಚುನಾವಣೆಗೆ ʻಕೈʼ ಅಭ್ಯರ್ಥಿಗಳ‌ ಪಟ್ಟಿ ಪ್ರಕಟ – ಖರ್ಗೆ ಸೇರಿ ರಾಜ್ಯದಿಂದ ಮೂವರು ಸ್ಪರ್ಧೆ

Spread the love

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ರಾಷ್ಟ್ರೀಯ ಕಾಂಗ್ರೆಸ್ ಕೊನೆಗೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಪ್ರಕಟ ಮಾಡಿದೆ.

ರಾಜ್ಯಸಭಾ ಚುನಾವಣೆ ಕರ್ನಾಟಕದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಮನ್ಸೂರ್ ಅಲಿಖಾನ್, ಪವನ್ ಖೇರಾ ಮೂವರು ಸ್ಪರ್ಧಿಸುತ್ತಿದ್ದಾರೆ ಎಂದು ಎಐಸಿಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಮೂವರು ಅಭ್ಯರ್ಥಿಗಳು ಶುಕ್ರವಾರ (ಜೂ.5) ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

WhatsApp Image 2026 06 04 at 22.04.22

ಇದರೊಂದಿಗೆ ಮಧ್ಯಪ್ರದೇಶದಿಂದ ಮೀನಾಕ್ಷಿ ನಟರಾಜನ್‌, ರಾಜಸ್ಥಾನದಿಂದ ನೀರಜ್ ಡಾಂಗಿ, ತಮಿಳುನಾಡಿನಿಂದ ಪ್ರವೀಣ್‌ ಚಕ್ರವರ್ತಿ ಹಾಗೂ ಜಾರ್ಖಂಡ್‌ನಿಂದ ಪ್ರಣವ್‌ ಝಾಃ ಅವರು ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ.

3ನೇ ಸ್ಥಾನದ ಅಭ್ಯರ್ಥಿಗಾಗಿ ಭಾರೀ ಕಸರತ್ತು ನಡೆದಿತ್ತು. ಆಂಧ್ರದ ಮಾಜಿ ಸಿಎಂ ವೈ.ಎಸ್ ರಾಜಶೇಖರ ರೆಡ್ಡಿ ಪುತ್ರಿ ಹಾಗೂ ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾ ರೆಡ್ಡಿ ಹಾಗೂ ಪವನ್ ಖೇರಾ ಅವರ ಹೆಸರು ರೇಸ್‌ನಲ್ಲಿತ್ತು. ಆದ್ರೆ ಹೈಕಮಾಂಡ್‌ ಪವನ್‌ ಖೇರಾ ಅವರ ಹೆಸರನ್ನು ಅಂತಿಮಗೊಳಿಸಿದೆ.

ಶುಕ್ರವಾರ ಮಧ್ಯಾಹ್ನ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ವೇಳೆ ರಾಹುಲ್ ಗಾಂಧಿ ಕೂಡ ಉಪಸ್ಥಿತರಿರಲಿದ್ದಾರೆ. ಈ ಮಧ್ಯೆ, ಎಂಎಲ್‌ಸಿ ಹಾಗೂ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಸದ್ದಿಲ್ಲದೆ ಸಹಿ ಸಂಗ್ರಹ ಮಾಡುತ್ತಿದೆ.

ರಾಜ್ಯದಿಂದ ಚುನಾಯಿತರಾಗುವ ಅಭ್ಯರ್ಥಿಗಳು ಸ್ಥಳೀಯರೇ ಆಗಿರಬೇಕು. ಯಾವುದೇ ಕಾರಣಕ್ಕೂ ಹೊರ ರಾಜ್ಯದವರಿಗೆ ಮಣೆ ಹಾಕುವುದು ಬೇಡ ಎಂಬುದು ಇಲ್ಲಿನ ನಾಯಕರ ಆಗ್ರಹವಾಗಿತ್ತು. ಆದರೆ, ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಪವನ್‌ ಖೇರಾ ಅವರನ್ನು ರಾಜ್ಯಸಭೆಗೆ ಚುನಾಯಿಸಿದೆ.

ನಾಮಪತ್ರ ಸಲ್ಲಿಕೆ ಮಾಡಲು ಜೂ.8 ಅಂತಿಮ ದಿನವಾಗಿದ್ದು, ಜೂ.9 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂ.11ರಂದು ಕೊನೆಯ ದಿನವಾಗಿದೆ.


Spread the love

About Laxminews 24x7

Check Also

ಕೊಲ್ಹಾಪುರದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಅಪರೂಪದ 17 ಗಂಟೆಗಳ ‘ಬ್ರೈನ್ ಬೈಪಾಸ್’ ಶಸ್ತ್ರಚಿಕಿತ್ಸೆ ಯಶಸ್ವಿ,ಪ್ರಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಶಿವಶಂಕರ ಮರಜಕ್ಕೆ ಮತ್ತು ತಂಡದ ಐತಿಹಾಸಿಕ ಸಾಧನೆ

Spread the love ಕೊಲ್ಹಾಪುರ:ವೈದ್ಯಕೀಯ ಲೋಕವೇ ಬೆರಗಾಗುವಂತಹ ಅಪರೂಪದ ಮತ್ತು ಅತ್ಯಂತ ಸಂಕೀರ್ಣವಾದ ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ