ಕಾರವಾರ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂ.3 ರಿಂದ ಜೂ.5ರ ವರೆಗೆ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜೂ.1 ರಿಂದ 4ರ ವರೆಗೆ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇಂದಿನಿಂದ (ಜೂ.2) ಜೂ.4 ರ ವರೆಗೆ ಅಲ್ಲಲ್ಲಿ ಅಲ್ಪ ಹಾಗೂ ಮಧ್ಯಮ ಗಾಳಿ ಸಹಿತ ಮಳೆಯಾಗಲಿದೆ. ಜೂ.5 ರಂದು ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ಹಾಗೂ ಮಲೆನಾಡು ಭಾಗದ ದಾಂಡೇಲಿ ಭಾಗದಲ್ಲಿ ಎಲ್ಲಾ ರೀತಿಯ ಜಲಸಾಹಸ ಕ್ರೀಡೆಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಆದೇಶ ಮಾಡಿದ್ದಾರೆ.
ಜೂ.1 ರಿಂದ ಜಾರಿಗೆ ಬರುವಂತೆ ಮಳೆ ಮುಗಿಯುವ ವರೆಗೆ ಈ ಆದೇಶ ಇರಲಿದ್ದು ಕಡಲ ತೀರಗಳಿಗೂ ಸಹ ಪ್ರವಾಸಿಗರಿಗೆ ನಿರ್ಬಂಧ ಇರಲಿದೆ.
Laxmi News 24×7