Breaking News

IPL ಆರ್‌ಸಿಬಿ ಫೈನಲ್‌; ಬೆಂಗಳೂರಲ್ಲಿ ಸಂಭ್ರಮಾಚರಣೆಗೆ ಬ್ರೇಕ್‌ – ಗೈಡ್‌ಲೈನ್ಸ್‌ ಬಿಡುಗಡೆ

Spread the love

ಬೆಂಗಳೂರು: ಐಪಿಎಲ್‌ 2026 ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಫೈನಲ್‌ ಪ್ರವೇಶಿಸಿದ್ದು, ಪಂದ್ಯದ ದಿನ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ.

ಕಳೆದ ಬಾರಿ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆದಿತ್ತು. ಮಧ್ಯರಾತ್ರಿ 12 ಗಂಟೆ ನಂತರ ರಸ್ತೆ ರಸ್ತೆಗಳಲ್ಲಿ ಆರ್‌ಸಿಬಿ ಫ್ಯಾನ್ಸ್‌ ಸೆಲಬ್ರೇಷನ್‌ ಮಾಡಿದ್ದರು. ಈ ಬಾರಿ ಸಂಭ್ರಮಾಚರಣೆಗೆಗೆ ಕಟ್ಟುನಿಟ್ಟಿನ ನಿಯಮ ತರಲಾಗಿದೆ. ಪೊಲೀಸ್‌ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಸೋಷಿಯಲ್ ಮೀಡಿಯಾದ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಒಂದು ವೇಳೆ ಆರ್‌ಸಿಬಿ ಫೈನಲ್‌ ಗೆದ್ದರೆ ಸೆಲೆಬ್ರೇಷನ್‌ಗೆ ಪೊಲೀಸರು ಕಠಿಣ ನಿಯಮ ಹೊರಡಿಸಿದ್ದಾರೆ.

ಮಾರ್ಗಸೂಚಿಯಲ್ಲೇನಿದೆ?
* ಸಾರ್ವಜನಿಕ ಸ್ಥಳಗಳಲ್ಲಿ ಸೆಲೆಬ್ರೇಷನ್ ಮಾಡುವಂತಿಲ್ಲ.
* ರಸ್ತೆಗಳ ಬಳಿ ಎಲ್ಇಡಿ ಅಳವಡಿಕೆಗೆ ಪೊಲೀಸರ ಅನುಮತಿ ಕಡ್ಡಾಯ.
* ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳ ಬಳಕೆ ಮಾಡುವಂತಿಲ್ಲ.
* ಹೆಚ್ಚು ಜನ ಸೇರಿದಾಗ ದುರ್ವರ್ತನೆ ಮಾಡುವಂತಿಲ್ಲ.
* ಬೈಕ್ ರ‍್ಯಾಲಿ, ಸ್ಟಂಟ್‌ಗಳು, ಹಾರ್ನ್ ಮಾಡುವಂತಿಲ್ಲ, ರಸ್ತೆಗಳನ್ನ ಬ್ಲಾಕ್ ಮಾಡುವಂತಿಲ್ಲ.
* ಮದ್ಯಪಾನ ಮಾಡಿ ಕೂಗಾಡೋದು, ಜಗಳ ಮಾಡೋದು ಮಾಡುವಂತಿಲ್ಲ.
* ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಸುದ್ದಿಗಳನ್ನ, ಪ್ರಚೋದನಾಕಾರಿ ಪೋಸ್ಟ್ ಮಾಡುವಂತಿಲ್ಲ.
* ಕಪ್ ಗೆದ್ದ ಖುಷಿಯಲ್ಲಿ ಬೇರೆ ಟೀಂನ ಅಭಿಮಾನಿಗಳಿಗೆ ರೇಗಿಸುವಂತಿಲ್ಲ.


Spread the love

About Laxminews 24x7

Check Also

ವೈದ್ಯಕೀಯ ಸಿಬ್ಬಂದಿ ಸೇವೆ ಪ್ರಶಂಸಾರ್ಹ

Spread the loveಬೆಳಗಾವಿ: ತುರ್ತು ವೈದ್ಯಕೀಯ ವಿಭಾಗವು ಆಸ್ಪತ್ರೆ ಪ್ರಮುಖ ಆಧಾರಸ್ತಂಭವಾಗಿದೆ. ಅಪಘಾತಗಳು, ಹೃದಯಾಘಾತ, ಸ್ಟ್ರೋಕ್, ವಿಷಸೇವನೆ, ಗಂಭೀರ ಗಾಯಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ