Breaking News

ಶಾರ್ಟ್ ಬಟ್ಟೆ ಧರಿಸಿ ರೀಲ್ಸ್‌ ಮಾಡಿದ ಸೊಸೆ: ಬೇಸರಗೊಂಡು ಅತ್ತೆ ಮಾವ ಆತ್ಮಹತ್ಯೆ.!!!

Spread the love

ಸಂಪ್ರದಾಯಸ್ಥ ಕುಟುಂಬದಲ್ಲಿ ಸೊಸೆಯು ಶಾರ್ಟ್ ಬಟ್ಟೆ ಹಾಕಿ ರೀಲ್ಸ್ ಮಾಡುತ್ತಿದ್ದುದಕ್ಕೆ ಅತ್ತೆ-ಮಾವ ಅಕ್ಷೇಪ ವ್ಯಕ್ತಪಡಿಸಿದ್ದರಿಂದ ಆರಂಭವಾದ ಜಗಳವು ದುರಂತಕ್ಕೆ ತಿರುಗಿದೆ. ಸೊಸೆಯ ಕಿರುಕುಳ, ಬೆದರಿಕೆ ಮತ್ತು ಮಾನಸಿಕ ಒತ್ತಡದಿಂದ ಹಿರಿಯ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ವಿವರ :
ರಾಜೇಶ್ ಮತ್ತು ಸುಮನ ದಂಪತಿಗಳ ಮಗನ ಪತ್ನಿ ಸ್ನೇಹಾ ಪ್ರತಿದಿನ ಸಣ್ಣ ಬಟ್ಟೆಗಳನ್ನು ಧರಿಸಿ ಅಂಗಾಂಗ ಪ್ರದರ್ಶಿಸುತ್ತಾ ರೀಲ್ಸ್ ಮಾಡುತ್ತಿದ್ದಳು. ಸಂಪ್ರದಾಯಸ್ಥ ಕುಟುಂಬದ ಅತ್ತೆ-ಮಾವ ಇದಕ್ಕೆ ಆಕ್ಷೇಪಿಸಿ ಸೊಸೆಗೆ ಸೂಚನೆ ನೀಡಿದ್ದರು. ಆದರೆ ಸ್ನೇಹಾ ರೀಲ್ಸ್ ಮುಂದುವರಿಸಿದ್ದಾಳೆ.

ಇದರಿಂದ ಅಸಮಾಧಾನಗೊಂಡ ಸ್ನೇಹಾ ಮತ್ತು ಆಕೆಯ ಕುಟುಂಬಸ್ಥರು ಅತ್ತೆ-ಮಾವನ ವಿರುದ್ಧ ತೀವ್ರ ಕಿರುಕುಳ, ಬೆದರಿಕೆ ಮತ್ತು ಹಲ್ಲೆಗೆ ಮುಂದಾದರು ಎಂದು ಆರೋಪವಿದೆ. ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಜೇಶ್ ಮತ್ತು ಸುಮನ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ಅವರು ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಪೊಲೀಸ್ ಕ್ರಮ

ರಾಜೇಶ್ ಅವರ ಸಹೋದರರು ಹರಿಯಾಣ ಮಡ್ಲೌಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಸ್ನೇಹಾ (ಸೊಸೆ), ಸ್ನೇಹಾಳ ತಾಯಿ, ತಂದೆ ಮತ್ತು ಸಹೋದರಿ ನಾಲ್ವರು ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಘಟನೆಯು ಸಾಮಾಜಿಕ ಮಾಧ್ಯಮ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಕೌಟುಂಬಿಕ ಮೌಲ್ಯಗಳ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ.


Spread the love

About Laxminews 24x7

Check Also

ನಾಲ್ಕು ತಿಂಗಳಿನಿಂದ ಬಾಕಿ ಉಳಿದಿದ್ದ ನರೇಗಾ ಬಾಕಿ ಕೂಲಿ ಬಿಡುಗಡೆ

Spread the loveಬೆಳಗಾವಿ :ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಆಡಳಿತಾತ್ಮಕ ಹಾಗೂ ಆರ್ಥಿಕ ಸಂಘರ್ಷ, ವಿಬಿಜಿ ರಾಮ್‌ಜಿ ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ