Breaking News

ಡಿಎಂಕೆ ‘ಬೆನ್ನಿಗೆ ಚೂರಿ’ ಆರೋಪಕ್ಕೆ ತಿರುಗೇಟು – ‘ಇತಿಹಾಸ ಮರೆಯಬೇಡಿ’ ಎಂದು ಕನ್ನಡಿ ತೋರಿಸಿದ ಕಾಂಗ್ರೆಸ್‌

Spread the love

ನವದೆಹಲಿ: ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ  ಪಕ್ಷಕ್ಕೆ ಬೆಂಬಲ ನೀಡಿದ ವಿಚಾರವಾಗಿ ಕಾಂಗ್ರೆಸ್  ಮತ್ತು ಡಿಎಂಕೆ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ.

“ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದೆ” ಎಂಬ ಡಿಎಂಕೆಯ ಗಂಭೀರ ಆರೋಪಕ್ಕೆ, ರಾಹುಲ್ ಗಾಂಧಿ ಆಪ್ತ ಹಾಗೂ ಕಾಂಗ್ರೆಸ್ ನಾಯಕ ಶ್ರೀವತ್ಸ(Srivatsa) ಅವರು ಅಂಕಿ-ಅಂಶ ಹಾಗೂ ಇತಿಹಾಸದ ದಾಖಲೆಗಳೊಂದಿಗೆ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಕರ್ನಾಟಕ ಕಾಂಗ್ರೆಸ್‌ ಜಾಲತಾಣ ಮುಖ್ಯಸ್ಥರಾಗಿದ್ದ ಶ್ರೀವತ್ಸ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಡಿಎಂಕೆಯ ಹಳೆಯ ಮೈತ್ರಿ ರಾಜಕೀಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ರಾಹುಲ್ ಗಾಂಧಿ ಅವರು ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ದೂರವಿಡಲು ಮತ್ತು ತಮಿಳುನಾಡಿನ ಜನರ ಜನಾದೇಶವನ್ನು ಗೌರವಿಸಲು ಟಿವಿಕೆಯನ್ನು ಬೆಂಬಲಿಸಿದ್ದಾರೆ. ಈ ಮಾಸ್ಟರ್ ಪ್ಲಾನ್ ಯಶಸ್ವಿಯಾಗಿದ್ದು, ದಳಪತಿ ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತ.


Spread the love

About Laxminews 24x7

Check Also

ವಿಧಾನ ಪರಿಷತ್‌ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ

Spread the love ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಇಂದು ಸಲೀಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ