Breaking News

ಶೃಂಗೇರಿ ನೂತನ ಶಾಸಕರಾಗಿ ಡಿ.ಎನ್.ಜೀವರಾಜ್‌ ಪ್ರಮಾಣವಚನ ಸ್ವೀಕಾರ

Spread the love

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಡಿ.ಎನ್.ಜೀವರಾಜ್‌ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು.

ಸ್ಪೀಕರ್ ಯು.ಟಿ.ಖಾದರ್ ಅವರು ಜೀವರಾಜ್‌ಗೆ ಪ್ರಮಾಣವಚನ ಬೋಧಿಸಿದರು. ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್, ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಮುನಿರಾಜು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಶೃಂಗೇರಿ ಶಾರದಾಂಬೆ ಮತ್ತು ಭಗವಂತನ ಹೆಸರಿನಲ್ಲಿ ಜೀವರಾಜ್ ಪ್ರಮಾಣವಚನ ಸ್ವೀಕರಿಸಿದರು. ನೂತನ ಬಿಜೆಪಿ ಶಾಸಕನಿಗೆ ಬೊಕ್ಕೆ, ವಿಧಾನಸಭೆ ನಡಾವಳಿಗಳ ಪುಸ್ತಕ ನೀಡಿದ ಸ್ಪೀಕರ್ ಖಾದರ್ ನೀಡಿ ಅಭಿನಂದಿಸಿದರು. ಆರ್‌.ಅಶೋಕ್ ಅವರು ಹಾರ, ಪೇಟೆ ಹಾಕಿ ಶಾಸಕರನ್ನು ಸನ್ಮಾನಿಸಿದರು.

ಶೃಂಗೇರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ರಾಜೇಗೌಡ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿಯ ಜೀವರಾಜ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಕ್ಷೇತ್ರದ ಚುನಾವಣೆಯ ಅಂಚೆ ಮತ ಮರು ಎಣಿಕೆಗೆ ಕೋರ್ಟ್‌ ಆದೇಶ ಹೊರಡಿಸಿತು. ಮರು ಎಣಿಕೆಯಲ್ಲಿ ಜೀವರಾಜ್‌ ಅವರಿಗೆ ಬಹುಮತ ಬಂತು. ಕೊನೆಗೆ ಜೀವರಾಜ್‌ ಅವರಿಗೆ ಚುನಾವಣಾಧಿಕಾರಿಗಳು ಪ್ರಮಾಣಪತ್ರ ನೀಡಿದರು.


Spread the love

About Laxminews 24x7

Check Also

ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ವಿಭಾಗೀಯ ಪೀಠ ಷರತ್ತುಬದ್ಧ ಅನುಮತಿ

Spread the loveಕಲಬುರಗಿ/ಬೀದರ್: ಜೂನ್ 28ರಂದು ಬೀದರ್‌ನ ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಕರ್ನಾಟಕ ಹೈಕೋರ್ಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ