Breaking News

ಲವ್ವರ್‌ಗಾಗಿ ಪತ್ನಿಗೆ ಡಿವೋರ್ಸ್ – ಇತ್ತ ಪತಿ ಬಿಟ್ಟು ಬರಲು ಒಪ್ಪದ ಪ್ರಿಯತಮೆಗೆ ಬೆಂಕಿಯಿಟ್ಟು ಕೊಲೆ

Spread the love

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಾರಿನಲ್ಲೇ ಮಹಿಳೆ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪತಿಯನ್ನು ಬಿಟ್ಟು ಬರಲು ಒಪ್ಪದಿದ್ದಕ್ಕೆ ಪ್ರಿಯತಮೆಯನ್ನು ಕಾರಿನಲ್ಲಿ ಕೊಲೆ ಮಾಡಿ ಅದಕ್ಕೆ ಬೆಂಕಿ ಹಚ್ಚಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ.

ಪ್ರಿಯಕರ ರಾಮಾಂಜಿನಪ್ಪ ಪ್ರಿಯತಮೆ ಸುಜಾತಳನ್ನು (35) ಕಾರಿನಲ್ಲಿ ಕೊಲೆ ಮಾಡಿ, ನಂತರ ಪೆಟ್ರೋಲ್‌ ಸುರಿದು ಬೆಂಕಿಯಿಟ್ಟಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಸುಜಾತಾ ದೇವನಹಳ್ಳಿ ಮೂಲದವರು ಎನ್ನಲಾಗಿದೆ.

ಮೃತ ಸುಜಾತಾ ಹಾಗೂ ರಾಮಾಂಜಿನಪ್ಪ ಅನೈತಿಕ ಸಂಬಂಧ ಹೊಂದಿದ್ದರು. ಇದೇ ಕಾರಣದಿಂದಾಗಿ ಕಳೆದ 4 ತಿಂಗಳ ಹಿಂದೆ ರಾಮಾಂಜಿನಪ್ಪ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ. ಬಳಿಕ ಸುಜಾತಳಿಗೂ ಗಂಡನ ಬಿಟ್ಟು ಬರುವಂತೆ ಟಾರ್ಚರ್ ಮಾಡುತ್ತಿದ್ದ. ಆದರೆ ಸುಜಾತ ಗಂಡನ ಬಿಟ್ಟು ಬರಲು ಒಪ್ಪಿರಲಿಲ್ಲ. ಸಿಟ್ಟಿನಲ್ಲಿ ಏ.2ರಂದು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾಳನ್ನು ಹೊಡೆದು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದ.

ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಾರಸಂದ್ರದ ಸುರೇಶ್ ಅವರದ್ದು ಎಂದು ಗೊತ್ತಾಗಿತ್ತು. ಬಳಿಕ ಸುರೇಶ್ ಅವರ ಕಾರನ್ನು ರಾಮಾಂಜಿನಪ್ಪ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿತ್ತು. ಇದೀಗ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ರಾಮಾಂಜಿನಪ್ಪ ಶವ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.


Spread the love

About Laxminews 24x7

Check Also

ಅಡ್ಡ ಮತದಾನ ಮಾಡಿದ್ದು ಸಾಬೀತಾದರೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಚಂದ್ರು ಲಮಾಣಿ

Spread the loveಗದಗ: ಪ್ರಾಮಾಣಿಕವಾಗಿ ಎನ್‌ಡಿಎಅಭ್ಯರ್ಥಿಗೆ ಮತ ಹಾಕಿದ್ದೇನೆ. ಧರ್ಮಸ್ಥಳ ಮಂಜುನಾಥನ ಮೇಲೆ ಮಾತ್ರವಲ್ಲ, ಯಾವುದೇ ದೇವರ ಮೇಲೆ ಪ್ರಮಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ