ಬೆಳಗಾವಿ ನಗರದ ಶಹಪೂರದ ಶಾಸ್ತ್ರಿ ನಗರದಲ್ಲಿ ಬಾಲ್ಯವಿವಾಹ ನಡೆಯುತ್ತಿದೆ ಎಂದು ಬಂದ ಮಾಹಿತಿ ಪ್ರಕಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಅಕ್ಕಪಡೆ ಬಾಲಕಿಯ ಮನೆಗೆ ಭೇಟಿ ನೀಡಿ ಬಾಲಕಿಯರ ರಕ್ಷಣೆ ಮಾಡಿದೆ.
ಬಾಲಕಿಯ ಮದುವೆಯು ಮೂಡಲಗಿಯ ನಿವಾಸಿಯೊಂದಿಗೆ ಮಾಡಲಾಗುತ್ತಿತ್ತು. ಸ್ಥಳಕ್ಕೆ ಭೇಟಿ ಮಾಡಿ ಬಾಲಕಿಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಬಾಲಕಿಗೆ 13 ವರ್ಷ ಎಂದು ತಿಳಿದು ಬಂದಿದೆ, ತಕ್ಷಣ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದಿಲೀಪ ಪಿ. ನಿಂಬಾಳಕರ ರವರ ನಿರ್ದೇಶನದಂತೆ ಅಕ್ಕಪಡೆಯ ಸಿಬ್ಬಂದಿ ಮಕ್ಕಳ ಸಹಾಯವಾಣಿ ತಂಡದವರು ಬಾಲ್ಯ ವಿವಾಹವನ್ನು ತಡೆದಿದ್ದಾರೆ.
ಬಾಲಕಿಯನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಹಾಗೂ ಬಾಲ್ಯ ವಿವಾಹ ನಡೆಸುತ್ತಿದ್ದ ಬಾಲಕಿಯ ತಂದೆಯ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7