Breaking News

13 ವರ್ಷದ ಬಾಲಕಿಯ ಬಾಲ್ಯವಿವಾಹ ತಡೆದ ಬೆಳಗಾವಿಯ ಅಕ್ಕ ಪಡೆ

Spread the love

ಬೆಳಗಾವಿ ನಗರದ ಶಹಪೂರದ ಶಾಸ್ತ್ರಿ ನಗರದಲ್ಲಿ ಬಾಲ್ಯವಿವಾಹ ನಡೆಯುತ್ತಿದೆ ಎಂದು ಬಂದ ಮಾಹಿತಿ ಪ್ರಕಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಅಕ್ಕಪಡೆ ಬಾಲಕಿಯ ಮನೆಗೆ ಭೇಟಿ ನೀಡಿ ಬಾಲಕಿಯರ ರಕ್ಷಣೆ ಮಾಡಿದೆ.‌

ಬಾಲಕಿಯ ಮದುವೆಯು ಮೂಡಲಗಿಯ ನಿವಾಸಿಯೊಂದಿಗೆ ಮಾಡಲಾಗುತ್ತಿತ್ತು. ಸ್ಥಳಕ್ಕೆ ಭೇಟಿ ಮಾಡಿ ಬಾಲಕಿಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಬಾಲಕಿಗೆ 13 ವರ್ಷ ಎಂದು ತಿಳಿದು ಬಂದಿದೆ, ತಕ್ಷಣ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದಿಲೀಪ ಪಿ. ನಿಂಬಾಳಕರ ರವರ ನಿರ್ದೇಶನದಂತೆ ಅಕ್ಕಪಡೆಯ ಸಿಬ್ಬಂದಿ ಮಕ್ಕಳ ಸಹಾಯವಾಣಿ ತಂಡದವರು ಬಾಲ್ಯ ವಿವಾಹವನ್ನು ತಡೆದಿದ್ದಾರೆ.

ಬಾಲಕಿಯನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ‌. ಹಾಗೂ ಬಾಲ್ಯ ವಿವಾಹ ನಡೆಸುತ್ತಿದ್ದ ಬಾಲಕಿಯ ತಂದೆಯ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಇಂದಿರಾ ಗಾಂಧಿ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ವಿವಾದ ಸೃಷ್ಟಿಸಿದ ಅಶೋಕ್ ಗೆಹ್ಲೋಟ್ ಹೇಳಿಕೆ

Spread the loveಜೈಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡಿರುತ್ತಿದ್ದರು ಎಂಬ ರಾಜಸ್ಥಾನದ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ