Breaking News

ಅಪ್ರಾಪ್ತ ಮಗನ ಕೈಗೆ ಬೈಕ್‌ ಕೊಟ್ಟ ತಪ್ಪಿಗೆ ಪಾಲಕರಿಗೆ ಭಾರಿ ಪ್ರಮಾಣದ ದಂಡ

Spread the love

ಧಾರವಾಡ: ತಮ್ಮ ಅಪ್ರಾಪ್ತ ಮಗನ ಕೈಗೆ ಬೈಕ್‌ ಕೊಟ್ಟ ತಪ್ಪಿಗೆ ಪಾಲಕರೊಬ್ಬರು ಭಾರಿ ಪ್ರಮಾಣದ ದಂಡ ಭರಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಮೈನುದ್ದೀನ್ ಜಲಾಲದಾರ ಎಂಬುವರೇ ಬಾರಿ ದಂಡ ಭರಿಸಿದ ಪಾಲಕರು. ಅವರ ಅಪ್ರಾಪ್ತ ಮಗ ಬೈಕ್‌ ಚಲಾಯಿಸುವಾಗ ಪೊಲೀಸರಿಗೆ ಸಿಕ್ಕು ಬಿದ್ದಿದ್ದನು. ನಂತರ ಪೊಲೀಸರು ಸಂಚಾರಿ ನಿಯಮಾನುಸಾರ ದಂಡ ವಿಧಿಸಿದ್ದರು.

ಧಾರವಾಡದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಪಾಲಕರು 26 ಸಾವಿರ ರೂಪಾಯಿ ದಂಡ ಭರ್ತಿ ಮಾಡಿದ್ದಾರೆ. ಬಳಿಕ ಪೊಲೀಸರು ಬೈಕ್ ಮಾಲೀಕರಿಗೆ ಸಂಚಾರಿ ನಿಯಮಗಳ ಮಾಹಿತಿ ನೀಡಿ ಕಳಿಸಿದ್ದಾರೆ. ಸಂಚಾರಿ ಠಾಣೆಯ ಸಿಪಿಐ ಶ್ರೀನಿವಾಸ ಮೇಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿ.ಐ.ಬಳ್ಳಾರಿ ಅವರು ಕ್ರಮ ಕೈಕೊಂಡಿದ್ದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ