Breaking News

ಮಜಗಾವದ ಆದಿನಾಥ ಜೈನ ಮಂದಿರದಲ್ಲಿ ಅಕ್ಷಯ ತೃತೀಯ ಸಡಗರ: ಭಗವಂತನಿಗೆ ಕಬ್ಬಿನ ಹಾಲಿನ ಅಭಿಷೇಕ

Spread the love

ಬೆಳಗಾವಿಯ ಮಜಗಾವ ಗ್ರಾಮದಲ್ಲಿ ಅಕ್ಷಯ ತೃತೀಯದ ನಿಮಿತ್ತ ಧಾರ್ಮಿಕ ಸಂಭ್ರಮ ಮನೆಮಾಡಿದೆ. ಮುನಿಗಳ ಮಾರ್ಗದರ್ಶನದಲ್ಲಿ ಭಗವಾನ್ ಆದಿನಾಥರಿಗೆ ವಿಶೇಷ ಕಬ್ಬಿನ ಹಾಲಿನ ಅಭಿಷೇಕ ಮಾಡುವ ಮೂಲಕ ಭಕ್ತರು ಭಕ್ತಿಭಾವದಿಂದ ಸಂಭ್ರಮಿಸಿದರು.
ಬೆಳಗಾವಿ ಸಮೀಪದ ಮಜಗಾವ ಗ್ರಾಮದ ಭಗವಾನ್ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಅಕ್ಷಯ ತೃತೀಯ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು. ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ನಡೆದ ಈ ಉತ್ಸವದಲ್ಲಿ, ಸುಮಾರು 338 ವರ್ಷಗಳ ಇತಿಹಾಸ ಹೊಂದಿರುವ ಮೂರ್ತಿಗೆ ನಮೋಕಾರ ಮಹಾಮಂತ್ರದೊಂದಿಗೆ ಶುದ್ಧ ಕಬ್ಬಿನ ಹಾಲಿನ ಅಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಜಗಾವ ಗ್ರಾಮದ ಪಂಚ್ ಕಮಿಟಿ, ಚತುರ್ಮಾಸ್ ಕಮಿಟಿ, ಎಲ್ಲಾ ಯುವಕ ಮಂಡಳ, ಮಹಿಳಾ ಮಂಡಳ ಹಾಗೂ ಪಾಠಶಾಲೆಯ ಬಾಲಕ ಮತ್ತು ಬಾಲಕಿಯರು ಉಪಸ್ಥಿತರಿದ್ದರು. ಭಗವಾನ್ ಆದಿನಾಥರು ಶ್ರೇಯಾಂಶ್ ರಾಜನಿಂದ ಆಹಾರ ಸ್ವೀಕರಿಸಿದ ಈ ದಿನದ ನೆನಪಿಗಾಗಿ ನಡೆದ ಈ ಪೂಜೆಯಲ್ಲಿ ಎಲ್ಲಾ ಶ್ರವಕ-ಶ್ರಾವಕೀಯರು ಪುಣ್ಯ ಲಾಭ ಪಡೆದರು. ಮಂದಿರದ ಆವರಣದಲ್ಲಿ ಜೈನ ಬಂಧುಗಳು ಭಕ್ತಿಯಿಂದ ನೃತ್ಯ ಮಾಡಿ, ಆರತಿ ಬೆಳಗುವ ಮೂಲಕ ಜಿನ ಭಗವಂತನ ಪ್ರಭಾವನೆಗೆ ಸಾಕ್ಷಿಯಾದರು.


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ