ಬೆಳಗಾವಿಯ ಶಿವಜಯಂತಿ ಅಂದ್ರೆ ಅಲ್ಲಿ ಸಜೀವ ರೂಪಕಗಳದ್ದೇ ಕಾರುಬಾರು. ಈ ಬಾರಿ ಚವ್ಹಾಟ್ ಗಲ್ಲಿಯ ಕ್ರಾಂತಿಸಿಂಹ ನಾನಾ ಪಾಟೀಲ್ ಚೌಕ್ ಮಂಡಳವು ಶಿವಭಕ್ತರ ಮನವಿಗೆ ಓಗೊಟ್ಟು, ತನ್ನ ಐತಿಹಾಸಿಕ ಸಜೀವ ರೂಪಕವನ್ನ ಒಂದೇ ಸ್ಥಳದಲ್ಲಿ ನಿಂತು ಪ್ರದರ್ಶಿಸಲು ನಿರ್ಧರಿಸಿದೆ. ಸುನಿಲ್ ಜಾಧವ್ ಅವರ ಮುಂದಾಳತ್ವದಲ್ಲಿ ಈ ಉಪಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗಾವಿಯ ಕ್ರಾಂತಿಸಿಂಹ ನಾನಾ ಪಾಟೀಲ್ ಚೌಕ್ ಚವಾಟ ಗಲ್ಲಿಯ ಶಿವಜಯಂತಿ ಉತ್ಸವ ಮಂಡಳವು ಈ ಬಾರಿ ಶಿವಭಕ್ತರಿಗಾಗಿ ವಿಶೇಷ ಸೌಲಭ್ಯವನ್ನ ಕಲ್ಪಿಸಿದೆ. ಪ್ರತಿವರ್ಷ ಮೆರವಣಿಗೆಯ ಜೊತೆ ಸಾಗುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ವೈಭವಯುತ *’ಸಜೀವ ರೂಪಕ’*ವನ್ನು, ಈ ಬಾರಿ ಸಾರ್ವಜನಿಕರ ಒತ್ತಾಯದ ಮೇರೆಗೆ ‘ಸಂಯುಕ್ತ ಮಹಾರಾಷ್ಟ್ರ ಚೌಕ’ದಲ್ಲಿ ಒಂದೇ ಕಡೆ ಸ್ಥಗಿತಗೊಳಿಸಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ಮಂಗಳವಾರ ಸಂಜೆ 7 ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವವರೆಗೂ ಈ ರೂಪಕ ಸತತವಾಗಿ ಪ್ರದರ್ಶನಗೊಳ್ಳಲಿದೆ ಎಂದು ಮಂಡಳಿಯ ಕಾರ್ಯಾಧ್ಯಕ್ಷ ಸುನಿಲ್ ಜಾಧವ್ ಹಾಗೂ ಅಧ್ಯಕ್ಷ ಅನಂತ ಬಾಮಣೆ ತಿಳಿಸಿದ್ದಾರೆ. ಬೈಟ್
ಮಂಡಳಿಯ ಪ್ರಮುಖರಾದ ರೋಹನ್ ಜಾಧವ್, ಭರತ್ ಕಾಳಗೆ ಹಾಗೂ ಗಲ್ಲಿಯ ಹಿರಿಯರ ನೇತೃತ್ವದಲ್ಲಿ ಈ ಅದ್ಧೂರಿ ವ್ಯವಸ್ಥೆ ಮಾಡಲಾಗಿದ್ದು, ಶಿವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
Laxmi News 24×7