Breaking News

ಕಾಗವಾಡ ತಾಲೂಕಿನ ಉಗಾರ ಖುರ್ದ್‌ನಲ್ಲಿ ‘ಜನಶಕ್ತಿ ಸೇವಾ ಸಂಘ’ ಉದ್ಘಾಟನೆ

Spread the love

ಭಾರತದಲ್ಲಿ ಯುವಶಕ್ತಿ ಒಗ್ಗೂಡುತ್ತಿರುವುದು ದೇಶದ ಅಭಿವೃದ್ಧಿಗೆ ಪೂರಕವಾದ ಶುಭ ಸಂಕೇತವಾಗಿದೆ. ಯುವಕರು ಗ್ರಾಮ, ಪಟ್ಟಣ ಹಾಗೂ ದೇಶದ ಪ್ರಗತಿಗಾಗಿ ಶ್ರಮಿಸಬೇಕು. ಸಂಘಟನೆಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಉಗಾರ ಸಕ್ಕರೆ ಕಾರ್ಖಾನೆಯ ಜನರಲ್ ಮ್ಯಾನೇಜರ್ ಅನಂತ್ ಸಿದ್ಧಾಂತಿ ಅಭಿಪ್ರಾಯಪಟ್ಟರು.

ರವಿವಾರ ಸಂಜೆ ಉಗಾರ ಖುರ್ದ್ ಪಟ್ಟಣದ ಬಿರೊಬಾ ಮಂದಿರದಲ್ಲಿ ನ್ಯಾಯವಾದಿ ರಾಹುಲ್ ಕಟಗೇರಿ ಅವರ ನೇತೃತ್ವದಲ್ಲಿ ಸ್ಥಾಪಿಸಲಾದ *’ಜನಶಕ್ತಿ ಸೇವಾ ಸಂಘ’*ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಂಘದ ಸಂಸ್ಥಾಪಕ ರಾಹುಲ್ ಕಟಗೇರಿ ಮಾತನಾಡಿ, “ಉಗಾರ ಪಟ್ಟಣದಲ್ಲಿನ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಅಸ್ವಚ್ಛತೆ ಹಾಗೂ ಜನಸಾಮಾನ್ಯರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸ್ಥಳೀಯ ಯುವಕರು ಈ ಸಂಘವನ್ನು ಸ್ಥಾಪಿಸಿದ್ದೇವೆ. ಬಡ ಕುಟುಂಬಗಳಿಗೆ ಸರ್ಕಾರಿ ಕಚೇರಿಗಳಲ್ಲಿ ತೊಂದರೆಯಾದರೆ ನಮ್ಮ ಸಂಸ್ಥೆ ಬೆಂಬಲವಾಗಿ ನಿಲ್ಲಲಿದೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಅನ್ಯಾಯದ ವಿರುದ್ಧ ಹೋರಾಡಲಿದ್ದೇವೆ,” ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಥಣಿಯ ಯುವ ನ್ಯಾಯವಾದಿ ವಿಜಯ್ ದೇಸಾಯಿ, ಶ್ರೀಶೈಲ ಮೈತ್ರಿ, ರಾಘವೇಂದ್ರ ಹಳಿಂಗಳಿ, ವೀರಭದ್ರ ಕಟಗೇರಿ ಹಾಗೂ ಅಮೀನ್ ಶೇಖ್ ಮಾತನಾಡಿ, “ಅನೇಕ ವರ್ಷಗಳ ಬಳಿಕ ಉಗಾರದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಂಘಟನೆಯೊಂದು ಅಸ್ತಿತ್ವಕ್ಕೆ ಬಂದಿದೆ. ರಾಹುಲ್ ಕಟಗೇರಿ ಅವರ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ, ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ,” ಎಂದರು.

ಕಾರ್ಯಕ್ರಮದಲ್ಲಿ ಉಗಾರದ ಹಿರಿಯ ಸಮಾಜ ಸೇವಕರಾದ ಮಹದೇವ್ ಕಟಗೇರಿ, ವೀರಭದ್ರ ಕಟಗೇರಿ, ದರ್ಶನ್ ಅಣಗೋಳ, ನ್ಯಾಯವಾದಿ ರಾಕೇಶ್ ಸಿಂಗೆ, ನೌಷಾದ ಮುಲ್ಲಾ, ವಿನಾಯಕ ಕಾಂಬಳೆ, ಜನಶಕ್ತಿ ಸೇವಾ ಸಂಘದ ಅಧ್ಯಕ್ಷ ರಾಜು ಯಶವಾಡೆ, ಉಪಾಧ್ಯಕ್ಷ ದಾವಲಮಲಿಕ್ ರಮಜಾನ್ ಜಮಖಾನೆ, ಕಾರ್ಯದರ್ಶಿ ಹಾರುಣ್ ಮುಲ್ಲಾ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ಪ್ರಾರಂಭ ಮಾಡ್ತೇನೆ: ಯತ್ನಾಳ್

Spread the love ವಿಜಯಪುರ: ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ವಿಚಾರ ಪ್ರಾರಂಭ ಮಾಡುತ್ತೇನೆ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ