ಮೈಸೂರು: ಈಜಲು ಕಾವೇರಿ ನದಿಗೆ ಇಳಿದಿದ್ದ 6 ಮಂದಿ ಜಲಸಮಾಧಿಯಾಗಿರುವ ಘಟನೆ ಕೆ.ಆರ್ ನಗರದ ಅರ್ಕೇಶ್ವರ ದೇಗುಲದ ಬಳಿ ನಡೆದಿದೆ.
ದರ್ಗಾಕ್ಕೆ ಬಂದಿದ್ದ ಮುಸ್ಲಿಂ ಕುಟುಂಬದ 8 ಜನರು ನದಿಗೆ ಇಳಿದಿದ್ದರು. ಈ ವೇಳೆ ನೀರಿನ ರಭಸಕ್ಕೆ ಸಿಲುಕಿ 6 ಮಂದಿ ಜಲಸಮಾಧಿಯಾಗಿದ್ದಾರೆ. ಉಳಿದ ಇಬ್ಬರನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಯಾಸಿನ್ (23), ಫಾತಿಮ್ (30), ನೇಹಾನ್(19), ಅಲೀಂ (13), ಹುಮಾಯೂನ್ (7), ವರ್ಷ ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಕೆ.ಆರ್ ನಗರ ಪೊಲೀಸರು (KR Nagara Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Laxmi News 24×7