Breaking News

ಇವರಿಗೆ ಅಧಿಕಾರ ಒಂದೇ ಕುಟುಂಬದ ಕೈಯಲ್ಲಿರಬೇಕು, ಹೆಣ್ಣುಮಕ್ಕಳು ಅಳುತ್ತಿದ್ದರೆ ಕಾಂಗ್ರೆಸ್, ಮಿತ್ರಪಕ್ಷಗಳು ಹಬ್ಬ ಮಾಡುತ್ತಿವೆ: ಮೋದಿ ಆಕ್ರೋಶ

Spread the love

ನವದೆಹಲಿ: ಕುಟುಂಬ ರಾಜಕಾರಣ ಮಾಡುವ ಪಕ್ಷಗಳು ಮಹಿಳೆಯರ ಸಬಲೀಕರಣವಾದರೆ ತಮ್ಮ ಆಂತರಿಕ ಅಧಿಕಾರ ಅಧಿಕಾರಕ್ಕೆ ಧಕ್ಕೆಯಾಗಬಹುದು ಎಂಬ ಭಯದಿಂದ ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿ ಮೋದಿ ಕಾಂಗ್ರೆಸ್‌, ಡಿಎಂಕೆ, ಟಿಎಂಸಿ, ಎಸ್‌ಪಿ ಮತ್ತು ಇತರ ಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಸಂಸತ್ತಿನಲ್ಲಿ ಮಸೂದೆ ಬಿದ್ದಾಗ ಕಾಂಗ್ರೆಸ್ ಸಂಭ್ರಮಿಸಿದ್ದನ್ನು ಉಲ್ಲೇಖಿಸಿದ ಮೋದಿ, ದೇಶದ ಹೆಣ್ಣುಮಕ್ಕಳು ಅಳುತ್ತಿದ್ದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಹಬ್ಬ ಮಾಡುತ್ತಿವೆ ಎಂದು ಭಾವನಾತ್ಮಕವಾಗಿ ವಾಗ್ದಾಳಿ ನಡೆಸಿದರು.

ದೇಶದ ಪ್ರಜೆಗಳು ಈಗ ‘ಕುಟುಂಬ ರಾಜಕಾರಣ’ ಮತ್ತು ‘ಅಭಿವೃದ್ಧಿ’ ನಡುವೆ ಯಾವುದನ್ನಾದರೂ ಒಂದನ್ನು ಆರಿಸಿಕೊಳ್ಳಬೇಕಾದ ಸಮಯ ಬಂದಿದೆ. 21ನೇ ಶತಮಾನದ ಮಹಿಳೆಯರು ಈ ರಾಜಕೀಯ ಪಕ್ಷಗಳ ನಡವಳಿಕೆಯನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಶಿಕ್ಷೆ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಮುಂಬರುವ ಚುನಾವಣೆಗಳಲ್ಲಿ ಮಹಿಳಾ ಮತದಾರರೇ ಈ ಪಕ್ಷಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ ಮತ್ತು ಈ ದ್ರೋಹಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂಬುದು ಮೋದಿಯವರ ಭಾಷಣದ ಸಾರವಾಗಿತ್ತು. 

ಮೋದಿ ಭಾಷಣ ಮುಖ್ಯಾಂಶಗಳು
ಕಾಂಗ್ರೆಸ್ ಸೇರಿದಂತೆ ಕೆಲವು ವಿರೋಧ ಪಕ್ಷಗಳು ಕೇವಲ ಒಂದು ಕುಟುಂಬದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ಮಸೂದೆಯನ್ನು ಉದ್ದೇಶಪೂರ್ವಕವಾಗಿ ಸೋಲಿಸಿದೆ ಮತ್ತು ಇದು ಆ ಪಕ್ಷದ ಮಹಿಳಾ ವಿರೋಧಿ ಮುಖವನ್ನು ತೋರಿಸುತ್ತದೆ.

ಕಾಂಗ್ರೆಸ್ ದೇಶದ ಪ್ರಗತಿಗೆ ಮತ್ತು ಯಾವುದೇ ದೊಡ್ಡ ಸುಧಾರಣೆಗಳಿಗೆ ಅಡ್ಡಗಾಲು ಹಾಕುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ದೇಶದ ಮಹಿಳೆಯರ ಸಬಲೀಕರಣಕ್ಕಿಂತ ಒಂದು ನಿರ್ದಿಷ್ಟ ಕುಟುಂಬದ ಹಿತಾಸಕ್ತಿಯೇ ಮುಖ್ಯವಾಗಿದೆ. ಅಧಿಕಾರವು ಕೇವಲ ಒಂದು ಕುಟುಂಬದ ಕೈಯಲ್ಲಿರಲಿ ಎಂಬ ಕಾರಣಕ್ಕೆ ಅವರು ತಳಮಟ್ಟದ ಮಹಿಳೆಯರು ರಾಜಕೀಯಕ್ಕೆ ಬರುವುದನ್ನು ತಡೆಯುತ್ತಿದ್ದಾರೆ.

ದಶಕಗಳಿಂದ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕಾಂಗ್ರೆಸ್ ಕೇವಲ ರಾಜಕೀಯ ನಾಟಕವಾಡುತ್ತಿದೆ ಮತ್ತು ಮಹಿಳೆಯರಿಗೆ ಸುಳ್ಳು ಭರವಸೆ ನೀಡಿ ವಂಚಿಸುತ್ತಿದೆ.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯು ಸೋಲನ್ನನುಭವಿಸಿದಾಗ ಡಿಎಂಕೆ ಮತ್ತು ಟಿಎಂಸಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇದು ಕೇವಲ ಮೇಜು ಕುಟ್ಟಿ  ಸಂಭ್ರಮಿಸುವ ವಿಷಯವಲ್ಲ. ಭಾರತದ ಮಹಿಳೆಯರ ಆತ್ಮಗೌರವಕ್ಕೆ ಮಾಡಿದ ಪ್ರಹಾರ.

ಮಹಿಳಾ ಮೀಸಲಾತಿ ಮಸೂದೆಯಿಂದಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಸಾಮಾನ್ಯ ಕುಟುಂಬಗಳ ಮಹಿಳೆಯರಿಗೆ ಸಂಸದರಾಗಲು ದೊಡ್ಡ ಅವಕಾಶವಿತ್ತು. ಆದರೆ ಡಿಎಂಕೆ ಮತ್ತು ಟಿಎಂಸಿ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಈ ಸುವರ್ಣ ಅವಕಾಶವನ್ನು ಹಾಳುಮಾಡಿವೆ.

ಮಸೂದೆಯು ಅಂಗೀಕಾರವಾಗಿದ್ದರೆ ಸೀಟುಗಳ ಸಂಖ್ಯೆ ಹೆಚ್ಚಾಗಿ ರಾಜ್ಯಗಳ ಧ್ವನಿ ಸಂಸತ್ತಿನಲ್ಲಿ ಇನ್ನಷ್ಟು ಬಲಗೊಳ್ಳುತ್ತಿತ್ತು. ಆದರೆ ಈ ಪ್ರಾದೇಶಿಕ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಹಿತಾಸಕ್ತಿಯನ್ನೇ ಬಲಿಕೊಟ್ಟಿವೆ.

ಇವತ್ತು ವಿಪಕ್ಷಗಳು ಸಂಭ್ರಮಿಸುತ್ತಿರಬಹುದು ಆದರೆ ಭಾರತದ ಕೋಟ್ಯಂತರ ಮಹಿಳೆಯರು ಇವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಈ ಮಸೂದೆಯು ಅಂಗೀಕಾರವಾಗಿದ್ದರೆ ಸಾಮಾನ್ಯ ವರ್ಗದ, ಹಿಂದುಳಿದ ವರ್ಗದ ಮತ್ತು ಬುಡಕಟ್ಟು ಸಮುದಾಯದ ಸಾವಿರಾರು ಮಹಿಳೆಯರು ಸಂಸತ್ತನ್ನು ಪ್ರವೇಶಿಸಿ ದೇಶದ ಭವಿಷ್ಯ ನಿರ್ಧರಿಸುವ ಶಕ್ತಿ ಪಡೆಯುತ್ತಿದ್ದರು. ಈ ಅವಕಾಶವನ್ನು ಕಸಿದುಕೊಂಡ ವಿರೋಧ ಪಕ್ಷಗಳಿಗೆ ಮಹಿಳೆಯರು ತಕ್ಕ ಪಾಠ ಕಲಿಸುತ್ತಾರೆ.

ಇದು 21ನೇ ಶತಮಾನದ ಭಾರತ. ಇಂದಿನ ಮಹಿಳೆಯರು ಸುಮ್ಮನೆ ಕೂರುವುದಿಲ್ಲ. ತಮಗೆ ಸಿಗಬೇಕಾದ ಹಕ್ಕನ್ನು ಕಿತ್ತುಕೊಂಡವರನ್ನು ಅವರು ಗುರುತಿಸಿದ್ದಾರೆ.

ಡಿಎಂಕೆ ಮತ್ತು ಟಿಎಂಸಿ ಪಕ್ಷಗಳು ತಮ್ಮ ಅಧಿಕಾರವು ಕೇವಲ ‘ಒಂದೇ ಕುಟುಂಬ’ದ ಕೈಯಲ್ಲಿ ಇರಲಿ ಎಂದು ಬಯಸುತ್ತವೆ. ಹೊರಗಿನ ಮಹಿಳೆಯರು ರಾಜಕೀಯವಾಗಿ ಮುನ್ನೆಲೆಗೆ ಬರುವುದು ಈ ಪಕ್ಷಗಳಿಗೆ ಇಷ್ಟವಿಲ್ಲ. 21ನೇ ಶತಮಾನದ ಮಹಿಳೆಯರು ಈ ನಾಯಕರ ನಡವಳಿಕೆಯನ್ನು ಕ್ಷಮಿಸುವುದಿಲ್ಲ ಮತ್ತು ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.


Spread the love

About Laxminews 24x7

Check Also

ವಿದ್ಯುತ್‌ ದರ ಏರಿಕೆ ವಾಪಸ್‌ ಪಡೆದು ಜನ ನೆಮ್ಮದಿಯಾಗಿ ಬದುಕೋಕೆ ಅವಕಾಶ ಮಾಡಿ – ಸರ್ಕಾರಕ್ಕೆ ಬಿಎಸ್‌ವೈ ಆಗ್ರಹ

Spread the loveಚಿಕ್ಕಮಗಳೂರು: ವಿದ್ಯುತ್ ದರವನ್ನು ರಾಜ್ಯ ಸರ್ಕಾರ ಹುಚ್ಚಂಬಟ್ಟೆ ಏರಿಕೆ ಮಾಡಿದೆ. ಇದು ಸರಿಯಾದ ನಿರ್ಧಾರ ಅಲ್ಲ. ದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ