ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಮರ್ಮಾಂಗ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ
ಬೆಂಗಳೂರು – ಲವ್ ಜಿಹಾದಿಯೊಬ್ಬ ತನಗೆ ಕ್ಯಾನ್ಸರ್ ಇದೆ ಎಂದು ಹೇಳಿಕೊಂಡು ಹಿಂದೂ ಶಿಕ್ಷಕಿಯೊಂದಿಗೆ ದೈಹಿಕ ಸಂಪರ್ಕಕ್ಕೆ ಬೇಡಿಕೆಯಿಟ್ಟಿರುವ ಘಟನೆ ನಡೆದಿದೆ.
೧. ಒಂದು ವರ್ಷದ ಹಿಂದೆ ಆಂಧ್ರಪ್ರದೇಶದ ಪುಟ್ಟಪರ್ತಿಯ ಅರ್ಷದ್ ಎಂಬಾತ ಬೆಂಗಳೂರಿನ ಸಂತ್ರಸ್ತ ಶಿಕ್ಷಕಿಗೆ ವಾಟ್ಸಾಪ್ ಮೂಲಕ ಅಪರಿಚಿತ ಸಂದೇಶ ಕಳುಹಿಸಿದ್ದ. ‘ನಾನು ನಿನ್ನ ಹಳೆಯ ಸಹಪಾಠಿ’ ಎಂದು ಪರಿಚಯಿಸಿಕೊಂಡು ಆಕೆಯೊಂದಿಗೆ ಸ್ನೇಹದಿಂದ ಮಾತನಾಡಿದ್ದ. ಆತನ ಮಾತನ್ನು ನಂಬಿದ ಶಿಕ್ಷಕಿ ಕೂಡ ಆತನೊಂದಿಗೆ ‘ಚಾಟಿಂಗ್’ ಮುಂದುವರಿಸಿದ್ದಳು.
೨. ಕೆಲವು ದಿನಗಳ ನಂತರ ಅರ್ಷದ್ ತನಗೆ ಕ್ಯಾನ್ಸರ್ ಇದೆ ಎಂದು ಹೇಳಿ ಶಿಕ್ಷಕಿಯ ಸಹಾನುಭೂತಿ ಗಿಟ್ಟಿಸಿಕೊಂಡ. ಇದೇ ನೆಪದಲ್ಲಿ ಆಕೆಯಿಂದ ಪದೇ ಪದೇ ಆರ್ಥಿಕ ಸಹಾಯ ಪಡೆಯಲಾರಂಭಿಸಿದ.
೩. ನಂತರ ‘ನನಗೆ ಕ್ಯಾನ್ಸರ್ ಇರುವುದರಿಂದ ನನ್ನ ಕೊನೆಯ ಆಸೆಯನ್ನು ಈಡೇರಿಸು’ ಎಂದು ಹೇಳಿ ಆತ ಶಿಕ್ಷಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ಬೇಡಿಕೆಯಿಟ್ಟ. ಶಿಕ್ಷಕಿ ಇದಕ್ಕೆ ನಿರಾಕರಿಸಿದಾಗ, ‘ಕನಿಷ್ಠ ನ್ಯೂಡ್ (ಬೆತ್ತಲೆ) ವಿಡಿಯೋ ಆದರೂ ಕಳುಹಿಸು’ ಎಂದು ಪೀಡಿಸಿದ. ಇದಕ್ಕೆ ಶಿಕ್ಷಕಿ ತನ್ನ ಅಂತಹ ವಿಡಿಯೋವನ್ನು ಆತನಿಗೆ ಕಳುಹಿಸಿದಳು.
೪. ವಿಡಿಯೋ ಕೈಸೇರುತ್ತಿದ್ದಂತೆ ಅರ್ಷದ್ ತನ್ನ ಬಣ್ಣ ಬದಲಾಯಿಸಿದ ಮತ್ತು ಆ ವಿಡಿಯೋವನ್ನು ಬಳಸಿಕೊಂಡು ಶಿಕ್ಷಕಿಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ. ‘ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ’ ಎಂದು ಬೆದರಿಕೆ ಹಾಕುತ್ತಾ ಹಣ ಮತ್ತು ಲೈಂಗಿಕ ಸಂಪರ್ಕಕ್ಕಾಗಿ ಒತ್ತಡ ಹೇರಲಾರಂಭಿಸಿದ.
೫. ಈ ಮಾನಸಿಕ ಕಿರುಕುಳವನ್ನು ಸಹಿಸಲಾಗದೆ ಶಿಕ್ಷಕಿ ತನ್ನ ಇತರ ಸಹೋದ್ಯೋಗಿಗಳಿಗೆ ಈ ವಿಷಯವನ್ನು ತಿಳಿಸಿದಳು. ನಂತರ ಅವರ ಸಹಾಯದಿಂದ ಆರೋಪಿಯನ್ನು ಬಲೆಗೆ ಬೀಳಿಸುವ ಯೋಜನೆ ರೂಪಿಸಲಾಯಿತು. ‘ನೀನು ಬೆಂಗಳೂರಿಗೆ ಬಂದರೆ, ನೀನು ಹೇಳಿದಂತೆ ನಾನು ಕೇಳುತ್ತೇನೆ’ ಎಂಬ ನಂಬಿಕೆ ಹುಟ್ಟಿಸಿ ಆರೋಪಿಯನ್ನು ಬೆಂಗಳೂರಿಗೆ ಕರೆಸಲಾಯಿತು.
೬. ಅರ್ಷದ್ ಶಿಕ್ಷಕಿಯ ಮನೆಗೆ ತಲುಪಿದಾಗ ಶಿಕ್ಷಕಿ ಮತ್ತು ಆಕೆಯ ಸಹೋದ್ಯೋಗಿಗಳು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು. ಈ ವೇಳೆ ದೂರು ನೀಡದಂತೆ ಅರ್ಷದ್ ವಿನಂತಿಸಿಕೊಂಡ; ಆದರೆ ಶಿಕ್ಷಕಿ ದೂರು ದಾಖಲಿಸಿದಳು.
೭. ಇದರಿಂದ ಗಾಬರಿಗೊಂಡ ಅರ್ಷದ್, ತನ್ನ ಬ್ಯಾಗ್‌ನಿಂದ ರೇಜರ್ ಬ್ಲೇಡ್ ತೆಗೆದು ತನ್ನ ಕೈ ಮತ್ತು ಮರ್ಮಾಂಗವನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Laxmi News 24×7