Breaking News

ಪೆಟ್ರೋಲ್ ಸುಂಕ ರೂ. 3ಕ್ಕೆ ಇಳಿಕೆ, ಡೀಸೆಲ್ ಮೇಲೆ ಈಗ ‘ಜೀರೋ’ ಟ್ಯಾಕ್ಸ್ – ನರೇಂದ್ರ ಮೋದಿಜಿ ಅವರಿಗೆ ನಾಗರಿಕರ ಪರವಾಗಿ ಕೃತಜ್ಞತೆಗಳು – ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ

Spread the love

ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 13 ರೂ.ಗಳಿಂದ 3 ರೂ ಪ್ರತಿ ಲೀಟರ್‌ಗೆ ಇಳಿಸಲಾಗಿದೆ.
ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 10 ರೂ ನಿಂದ ಶೂನ್ಯಕ್ಕೆ ಇಳಿಸಲಾಗಿದೆ.
ತೈಲ ಕಂಪನಿಗಳು ಈಗಾಗಲೇ ಪೆಟ್ರೋಲ್ ಮೇಲೆ 24 ರೂ ಪ್ರತಿ ಲೀಟರ್ ಮತ್ತು ಡೀಸೆಲ್ ಮೇಲೆ 30 ರೂ ಪ್ರತಿ ಲೀಟರ್ ಗೆ ನಷ್ಟವನ್ನು ಭರಿಸುತ್ತಿವೆ. ಭಾರತ ಸರ್ಕಾರ ಆ ಹೊರೆಯನ್ನು ತನ್ನದೇ ಆದ ತೆರಿಗೆ ಆದಾಯದ ವೆಚ್ಚಗಳ ಮೂಲಕ ಕಡಿಮೆ ಮಾಡುತ್ತಿದೆ. ಭಾರತದ ಗ್ರಾಹಕರು ಸಂಕಷ್ಟ ಎದುರಿಸುತ್ತಿರುವಾಗ ಸಂಸ್ಕರಣಾಗಾರಗಳು ವಿದೇಶದಲ್ಲಿ ಮಾರಾಟ ಮಾಡಿ ಲಾಭ ಗಳಿಸಲು ಸಾಧ್ಯವಾಗದಂತೆ, ರಫ್ತು ತೆರಿಗೆಯನ್ನು ಕೂಡ ವಿಧಿಸಲಾಗಿದೆ.
ಈ ದಿಟ್ಟ, ಸಕಾಲಿಕ ಮತ್ತು ಜನಪರ ನಿರ್ಧಾರಕ್ಕಾಗಿ ಆದರಣೀಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ, ಸನ್ಮಾನ್ಯ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಜೀ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಸನ್ಮಾನ್ಯ ಶ್ರೀ ಹರ್ದೀಪ್ ಸಿಂಗ್ ಪುರಿ ಜೀ ಅವರಿಗೆ ಸಮಸ್ತ ನಾಗರಿಕರ ಪರವಾಗಿ ಆದರಪೂರ್ವಕ ಕೃತಜ್ಞತೆಗಳು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ