Breaking News

ದ್ಯಾಮವ್ವದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಹೊನ್ನಾಟದಲ್ಲಿ ಮಿಂದೆದ್ದ ಭಕ್ತಗಣ

Spread the love

ಮಲ್ಲಮ್ಮನ ಬೆಳವಡಿ: ಸಮೀಪದ ಪಟ್ಟಿಹಾಳ ಕೆ.ಬಿ.ಗ್ರಾಮದಲ್ಲಿ ದ್ಯಾಮವ್ವದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಅದ್ದೂರಿ ಹೊನ್ನಾಟ ಜರುಗಿತು.
ತಳಿರು-ತೋರಣ ಹಾಗೂ ರಂಗೋಲಿ ಚಿತ್ತಾರಗಳಿಂದ ಗ್ರಾಮದ ಪ್ರಮುಖ ಬೀದಿಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ಗ್ರಾಮದ ಗುರು-ಹಿರಿಯರು ಅದ್ದೂರಿ ಹೊನ್ನಾಟಕ್ಕೆ ಚಾಲನೆ ನೀಡಿದರು. ವಿವಿಧ ವಾದ್ಯಮೇಳಗಳೊಂದಿಗೆ ಸಾಗಿದ ಹೊನ್ನಾಟದಲ್ಲಿ ಭಕ್ತರೆಲ್ಲ ಭಾಗವಹಿಸಿ ಸಂಭ್ರಮಿಸಿದರು.
ಗ್ರಾಮ ಸೇರಿ ಸವಟಗಿ, ಖೊದಾನಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ಶ್ರದ್ಧಾ, ಭಕ್ತಿಯಿಂದ ದ್ಯಾಮವ್ವದೇವಿ ಹಾಗೂ ದುರ್ಗಾದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಸೇವೆ ಸಲ್ಲಿಸಿದರು. ಬಳಿಕ ಅನ್ನಪ್ರಸಾದ ಸೇವೆ ನಡೆಯಿತು.
ನಾಟಕ ಪ್ರದರ್ಶನ ಇಂದು: ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಮಾ.24ರಂದು ರಾತ್ರಿ 10ಗಂಟೆಗೆ ‘ಹುತ್ತದಲ್ಲಿ ಕೈ ಇಟ್ಟ ಮುತ್ತೈದೆ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮುಖಂಡರಾದ ಮಲ್ಲನಗೌಡ ಪಾಟೀಲ, ಅರ್ಜುನ ಕತ್ತಿ, ಅಲ್ಲಿಸಾಬ್ ನಧಾಫ್
 ಶಿವಪ್ಪ ಗಡದವರ. ಡಿ.ಕೆ.ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಬಸರಗಿ, ಶಿವಾನಂದ ಗುರಲಕಟ್ಟಿ, ಶ್ರೀಧರ ಮಿರ್ಜಿ, ಮಹಾಂತೇಶ ಕತ್ತಿ, ಅಜ್ಜಪ್ಪ ಉಳಿಗೇರಿ, ಸೋಮಶೇಖರ ಗುರುಪುತ್ರನವರ, ಗೊಡಚಯ್ಯ ಹಿರೇಮಠ, ಅರ್ಚಕರಾದ ಅರ್ಜುನ ಕೋಲಕಾರ, ಬಸವಂತಪ್ಪ ಕೋಲಕಾರ ಹಾಗೂ ಬಸಯ್ಯ ಪೂಜೇರ, ಮಲ್ಲಸರ್ಜ ಕತ್ತಿ, ಮಹಾಂತೇಶ ಮುರಗೋಡ, ನಿಜಲಿಂಗಪ್ಪ ಕಲ್ಲೂರ ಇತರರಿದ್ದರು.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ