Breaking News

ನವೀಕೃತ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಉದ್ಗಾಟಿಸಿದ :ಸಚಿವ‌ ಪ್ರಿಯಾಂಕ್ ಖರ್ಗೆ

Spread the love

ಕಲಬುರಗಿ : ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಥಳೀಯ ಶಾಸಕ ಡಾ.ಅವಿನಾಶ ಜಾಧವ ಅವರೊಂದಿಗೆ ಅರಣ್ಯ ಇಲಾಖೆಯಿಂದ ಚಿಂಚೋಳಿ ಬಳಿಯ ಪೋಲಕಪಲ್ಲಿಯಲ್ಲಿ ಸುಮಾರು 1.30 ಕೋಟಿ ರೂ.‌ ವೆಚ್ಚದಲ್ಲಿ ನವೀಕೃತ ಸಾಲು ಮರದ ತಿಮ್ಮಕ್ಕ ವೃಕ್ಷವನ ಇಂದು  (ಶನಿವಾರ) ಉದ್ಘಾಟಿಸಿದರು.
ನಂತರ ಅಧಿಕಾರಿಗಳೊಂದಿಗೆ ವನದಲ್ಲಿ ಒಂದು ಸುತ್ತು ಹಾಕಿ ವಿವಿಧ ಸಸ್ಯ ರಾಶಿಗಳನ್ನು ವೀಕ್ಷಿಸಿದರು. ಲೋಟಸ್ ಎಕೋ ಪಾಂಡ್ ಬಳಿ ಪೋಟೋ ಗೆ ಪೋಸ್ ನೀಡಿದರು.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ 2021-22ನೇ ಸಾಲಿನ ಲ್ಯಾಂಡ್ ಬಿಲ್ಡಿಂಗ್ ಯೋಜನೆ ಅಡಿಯಲ್ಲಿ 37.50 ಲಕ್ಷ‌ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಚಿಂಚೋಳಿ ಅರಣ್ಯ ವಲಯದ ಹೊಸ ವಲಯ ಅರಣ್ಯಾಧಿಕಾರಿಗಳ ಕಛೇರಿ ಕಟ್ಟಡ ಮತ್ತು 2024-25ನೇ ಸಾಲಿನ ಲಿಂಕ್ ಡಾಕುಮೆಂಟ್ ಯೋಜನೆ ಅಡಿಯಲ್ಲಿ ಚಿಂಚೋಳಿ ಸಾಮಾಜಿಕ ಅರಣ್ಯ ವಲಯದ ಹೊಸ ವಲಯ ಅರಣ್ಯ ಅಧಿಕಾರಿಗಳ ಕಛೇರಿ ಕಟ್ಟಡ ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳ ವಸತಿ ಗೃಹ ಕಟ್ಟಡವನ್ನು ಸಹ ಉದ್ಘಾಟಿಸಲಾಯಿತು.
ಜಾಗೃತಿ ಅಭಿಯಾನಕ್ಕೆ‌ ಚಾಲನೆ:*
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗು ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ ಸಹಯೋಗದೊಂದಿಗೆ ಕಸ್ಕುಟ (ಅಂತರವಳ್ಳಿ / ಮಂಗನ ಬಾಲ) ಕಳೆಯ ನಿರ್ವಹಣೆ ಹಾಗೂ ತೊಗರಿಯಲ್ಲಿ ಬರುವ ಗೊಡ್ಡು / ನೆಟೆ ರೋಗ ನಿರ್ವಹಣೆ ಕುರಿತು ರೈತಾಪಿ ಜನರಲ್ಲಿ ಅರಿವು ಮುಯಡಿಸಲು ಕೃಷಿ ಇಲಾಖೆಯ ಜಾಗೃತಿ ಅಭಿಯಾನಕ್ಕೆ‌ಚ
ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು. ಇದಲ್ಲದೆ‌ ಪೋಸ್ಟರ್ ಸಹ ಬಿಡುಗಡೆ ಮಾಡಲಾಯಿತು. ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ಇದ್ದರು.
ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ‌ ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ ಪನ್ವಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಎಫ್ ಸುಮಿತ ಪಾಟೀಲ, ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಜಾಣ, ಮಾಜಿ‌ ಶಾಸಕ ಕೈಲಾಸನಾಥ ಪಾಟೀಲ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸುಭಾಷ ರಾಠೋಡ, ದೀಪಕನಾಗ್ ಪುಣ್ಯಶೆಟ್ಟಿ ಸೇರಿದಂತೆ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು.

Spread the love

About Laxminews 24x7

Check Also

ತಿಂಗಳೊಳಗೆ ಗುಲ್ಬರ್ಗ ವಿವಿ ಬಿ.ಇಡಿ ಫಲಿತಾಂಶಕ್ಕೆ ಸೂಚಿಸಿ ರಾಜ್ಯಪಾಲರ ಆದೇಶ

Spread the loveಬೆಂಗಳೂರು: ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 2024ರ ಡಿಸೆಂಬರ್‌ನಲ್ಲಿ ನಡೆದಿದ್ದ ಬಿ.ಇಡಿ 2 ಮತ್ತು 4ನೇ ಸೆಮಿಸ್ಟರ್‌ಗಳಿಗೆ ನಡೆಸಿದ ಪರೀಕ್ಷೆಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ