ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ರೊಹಿಣಿ ಬಾ. ಪಾಟೀಲ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ಮಹಿಳಾ ಅಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ವಿಶೇಷ ಸಂದರ್ಭದಲ್ಲಿ ನನ್ನ ಧರ್ಮಪತ್ನಿಯವರಾದ ಶ್ರೀಮತಿ Shruti Vaidya ರವರು ಭಾಗವಹಿಸಿ, ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿ. ಮಹಿಳಾ ಸಬಲೀಕರಣ ಮತ್ತು ಸಮಾಜದಲ್ಲಿ ಮಹಿಳೆಯರ ಪಾತ್ರದ ಕುರಿತು ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗುವ ಮಹಿಳೆಯರೇ ಈ ನಾಡಿನ ನಿಜವಾದ ಶಕ್ತಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:
ಕ್ಯಾಂಪ್ ವಾಕ್ (Camp Walk): ಮಹಿಳೆಯರ ಗರಿಮೆ ಮತ್ತು ನಡಿಗೆಯ ಗತ್ತು!
ನೃತ್ಯ ಸ್ಪರ್ಧೆ: ಕಲೆ ಮತ್ತು ಲಯದ ಅದ್ಭುತ ಸಂಗಮ!
ಆಶುಭಾಷಣ ಸ್ಪರ್ಧೆ: ವಿಚಾರಧಾರೆಗಳ ಹರಿವು ಹಾಗೂ ಮಾತಿನ ಚತುರತೆ!
ಕಿತ್ತೂರು ರಾಣಿ ಚೆನ್ನಮ್ಮನ ನಾಡಿನ ವೀರ ವನಿತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ದಿನವನ್ನು ಅತ್ಯಂತ ಯಶಸ್ವಿಗೊಳಿಸಿದರು.
Laxmi News 24×7