Breaking News

ಪರಿಚಯದವರಂತೆ ನಂಬಿಸಿ 2.29 ಲಕ್ಷ ರೂ. ವಂಚನೆ

Spread the love

ಹುಬ್ಬಳ್ಳಿ: ಅಯೋಧ್ಯೆಗೆ ಹೋಗಿದ್ದ ವೇಳೆ ನಗ-ನಗದು, ಕಾರು ಕಳವಾಗಿದೆ. ನಾನು ನಿಮಗೆ ದೂರದ ಸಂಬಂಧಿಯಾಗಬೇಕೆಂದು ಧಾರವಾಡದ ಗುತ್ತಿಗೆದಾರರನ್ನು ನಂಬಿಸಿದ ವಂಚಕ ರಮೇಶಕುಮಾರ, ವಾಪಸ್ ಕೊಡುವುದಾಗಿ 80 ಸಾವಿರ ರೂ. ಕೇಳಿದ್ದಾರೆ. ಈ ಮಾತು ನಂಬಿದ ಗುತ್ತಿಗೆದಾರ ನಿಂಗರಡ್ಡಿ ಟಿ., ರಮೇಶಕುಮಾರ ಖಾತೆಗೆ 2.29 ಲಕ್ಷ ರೂ. ವರ್ಗಾಯಿಸಿ ವಂಚನೆಗೆ  ಒಳಗಾಗಿದ್ದಾರೆ.
ಕೆಇಬಿ ಇಂಜಿನಿಯರ್ ಎಂದು ಪರಿಚಯಿಸಿಕೊಂಡ ರಮೇಶಕುಮಾರ, ಅಯೋಧ್ಯೆಗೆ ಹೋಗಿದ್ದ ವೇಳೆ ಹಣ, ಕಾರು, ಬಂಗಾರ ಕಳವಾಗಿದೆ. ಕುಟುಂಬ ಸಮೇತ ಬೆಂಗಳೂರಿಗೆ ವಾಪಸ್ ಬರಲು ವಿಮಾನ ಟಿಕೆಟ್ ಬುಕ್ ಮಾಡಲು 80 ಸಾವಿರ ರೂ. ಬೇಕು ಎಂದಿದ್ದಾರೆ. ಅಲ್ಲದೆ, ಪಡೆದ ಹಣ ಹಿಂತಿರುಗಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಇದನ್ನು ನಂಬಿದ ನಿಂಗರಡ್ಡಿ, ರಮೇಶ ಕುಮಾರ ಹೇಳಿದ ಖಾತೆಗೆ 2,29,650 ರೂ. ವರ್ಗಾಯಿಸಿದ್ದಾರೆ. ನಂತರ ರಮೇಶಕುಮಾರ ಸಂವಹನ ಕಡೆದುಹೋಗಿದ್ದು, ಮೋಸ ಹೋಗಿದ್ದರ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ:ಬಾಯ್ ಪ್ರೇಂಡ್ ಜೊತೆಗೆ ಸೇರಿ ಪತಿಯ ಭೀಕರ ಹತ್ಯೆ ಮಾಡಿಸಿದ ಪತ್ನಿ

Spread the loveಬೆಳಗಾವಿಯ ಟಿಳಕವಾಡಿ ಪೊಲೀಸರಿಂದ ರೋಚಕ ಪ್ರಕರಣ ಬಯಲು ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣವರ (40) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ