Breaking News

ಹೊಲಗಳಲ್ಲಿ ಕಳ್ಳತನ ನಿಯಂತ್ರಣಕ್ಕೆ ಒತ್ತಾಯಿಸಿ ಸಾರ್ವಜನಿಕರ ಪ್ರತಿಭಟನೆ

Spread the love

ಯರಗಟ್ಟಿ: ಪಟ್ಟಣ ಹಾಗೂ ಸುತ್ತಲಿನ ಭಾಗದ ಹೊಲಗಳಲ್ಲಿ ಮೋಟರ್​, ಪಂಪ್​, ಕೇಬಲ್​ ಕಳ್ಳತನ ಪ್ರತಿದಿನ ಹೆಚ್ಚುತ್ತಿದೆ. ಈ ಕುರಿತು ಹಲವಾರು ಬಾರಿ ಪೊಲೀಸರಿಗೆ ದೂರು ನೀಡಿದರೂ, ಕಳ್ಳತನ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ರೆತರು, ಸಾರ್ವಜನಿಕರು ಬುಧವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಇಲ್ಲಿಯವರೆಗೆ ಬಹಳಷ್ಟು ರೈತರ ಮೋಟಾರ್​, ಪಂಪ್​, ಕೇಬಲ್​ ಕಳವಾಗಿರುವ ತನವಾಗಿರುವ ಉದಾಹರಣೆಗಳಿವೆ. ಎರಡು ದಿನಗಳ ಹಿಂದೆ ಗೋಪಾಲ ದೇವರಡ್ಡಿ, ಮಂಜುನಾಥ ದೇವರಡ್ಡಿ, ರಾಜೇಂದ್ರಗೌಡ ಪಾಟೀಲ, ವಿಠ್ಠಲ ಕಳ್ಳಿಗುದ್ದಿ, ಚಂದ್ರಪ್ಪ ತೋರಣಗಟ್ಟಿ ಎಂಬ ರೈತರ ಹೊಲದಲ್ಲಿನ ಕಳುವಾಗಿದೆ. ಸುರೇಶ ಬಂಟನೂರ ಹಾಗೂ ರಾಜು ಗೋಕಾಕ ಎಂಬುವರ ಹೊಲದಲ್ಲಿನ ಆಡು ಕಳವಾಗಿದೆ. ಲಕ್ಕಪ್ಪ ಹುಣಶೀಕಟ್ಟಿ ಎಂಬುವರ ಬೈಕ್​ ಕಳ್ಳತನವಾಗಿದೆ. ಹೀಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು ಇವರಿಗೆ ಪೊಲೀಸರ ಭಯ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಳವು ಮಾಡಿದ ವಸ್ತುಗಳನ್ನು ರಸ್ತೆ ಬದಿಯಲ್ಲಿ ನಿರ್ಮಿಸಿರುವ ಅನಧಿಕೃತ ಶೆಡ್​ಗಳಲ್ಲಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ. ಹೆದ್ದಾರಿ ಪಕ್ಕದಲ್ಲಿ ಬೇಕಾಬಿಟ್ಟಿಯಾಗಿ ಹಾಕಿರುವ ಶೆಡ್​ ತೆರವುಗೊಳಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.
ಶ್ರೀದಲ್ಲಿ ಲೋಕೋಪಯೋಗಿ ಹಾಗೂ ಪೊಲೀಸ್​ ಅಧಿಕಾರಿಗಳ ಸಭೆ ಕರೆದು ಮುಂದಿನ ಕಾರ್ಯಾಚರಣೆ ನಡೆಸಿ ಎಂದು ತಹಸೀಲ್ದಾರ್​ ಎಂ.ವಿ.ಗುಂಡಪ್ಪಗೋಳ ತಿಳಿಸಿದರು. ಪಪಂ ಸದಸ್ಯ ನಿಖಿಲ ಪಾಟೀಲ, ಸಂತೋಷ ಹಾದಿಮನಿ, ಸುರೇಶ ಬಂಟನೂರ, ಗೋಪಾಲ ಕಡೆಮನಿ, ಚೇತನ ಜಕಾತಿ, ಲಕ್ಕಪ್ಪ ಹುಣಶೀಕಟ್ಟಿ, ಡಿ.ಕೆ.ರಫೀಕ್​, ರಮೇಶ ರ್ಬಿಜಿ, ಈರಣ್ಣ ಪೂಜೇರ, ಮಂಜುನಾಥ ಭಾವಿಹಾಳ, ರಮೇಶ ಪಾಟೀಲ, ಕಿಟ್ಟು ತೊರಗಲ್ಲ, ಪ್ರವಿಣ ಬೆಣ್ಣಿ, ಹನುಮಂತ ಹೂಲಿ, ಮಂಜುನಾಥ ದೇವರಡ್ಡಿ, ಸುನೀಲ ಬುದಿಗೋಪ್ಪ ಇತರರು ಇದ್ದರು.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ