Breaking News

ವಿಧಾನಸೌಧದಲ್ಲಿ ಮಾಧ್ಯಮಗಳ ನಿರ್ಬಂಧಕ್ಕೆ ವಿರೋಧ – ಮಾಧ್ಯಮ ಪ್ರತಿನಿಧಿಗಳಿಂದ ಮೌನ ಧರಣಿ

Spread the love

ಬೆಂಗಳೂರು: ಭದ್ರತೆಯ ನೆಪವೊಡ್ಡಿ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಭಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನ ವಿರೋಧಿಸಿ ಮಾಧ್ಯಮ ಪ್ರತಿನಿಧಿಗಳಿಂದು ಮೌನ ಧರಣಿ ನಡೆಸಿದರು.

ವಿಧಾನಸೌಧದ ಗಾಂಧಿ ಪ್ರತಿಮೆ  ಮುಂಭಾಗದಲ್ಲಿ ಕುಳಿತು ಮುಖಕ್ಕೆ ಕಪ್ಪು ಮಾಸ್ಕ್‌ ಧರಿಸಿ ಮೌನ ಧರಣಿ ನಡೆಸಿದರು.

Media Protest 3

ಅಲ್ಲದೇ ಮಾಧ್ಯಮ ಸ್ವಾತಂತ್ರ್ಯ ರಕ್ಷಿಸಲು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನ ಎತ್ತಿಹಿಡಿಯಲು ಪತ್ರಿಕೋದ್ಯಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ನಿರ್ಬಂಧಗಳನ್ನ ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಸ್ಥಳಕ್ಕೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ (KV Prabhakar) ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಮುಖ್ಯಮಂತ್ರಿಗಳ ಗಮನಕ್ಕೆ ವಿಚಾರ ತರುವುದಾಗಿ ತಿಳಿಸಿದರು.

ಭದ್ರತೆಯ ನೆಪವೊಡ್ಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾಧ್ಯಮಗಳಿಗೆ ಹೊಸ ಲಕ್ಷ್ಮಣ ರೇಖೆ ಎಳೆದಿದೆ. ಮಾಧ್ಯಮಗಳಿಂದ ಭದ್ರತೆಗೆ ಸಮಸ್ಯೆ ಆಗ್ತಿದೆ ಅಂತ ಹೇಳಿ ಇನ್ನು ಮುಂದೆ ವಿಧಾನಸೌಧದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಜನಪ್ರತಿನಿಧಿಗಳ ಪ್ರತಿಕ್ರಿಯೆ ಪಡೆಯಬೇಕು ಅಂತ ನಿಯಮ ಮಾಡಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ವಾರ್ತಾ ಇಲಾಖೆಗೆ ಈ ಸಂಬಂಧ ಪತ್ರ ಬರೆದಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ತರೋ ಕೆಲಸಕ್ಕೆ ಸರ್ಕಾರವೇ ಮುಂದಾಗಿದೆ.

ಹೊಸ ನಿಯಮದ ಅನ್ವಯ ಸರ್ಕಾರವು ವಿಧಾನಸೌಧದಲ್ಲಿ ನಿರ್ದಿಷ್ಟವಾದ ಒಂದು ಅಥವಾ ಎರಡು ಸ್ಥಳಗಳನ್ನು ಮಾತ್ರ ‘ಮೀಡಿಯಾ ಪಾಯಿಂಟ್’ ಎಂದು ಗುರುತಿಸಲಿದೆ. ರಾಜಕೀಯ ನಾಯಕರು ಅಥವಾ ಸಚಿವರು ತಮಗೆ ಇಷ್ಟವಿದ್ದರೆ ಮಾತ್ರ ಆ ಸ್ಥಳಕ್ಕೆ ಬಂದು ಹೇಳಿಕೆ ನೀಡಬೇಕಾಗುತ್ತದೆ.


Spread the love

About Laxminews 24x7

Check Also

ಮುಖ್ಯಮಂತ್ರಿ ,ಉಪ ಮುಖ್ಯಮಂತ್ರಿ ಹಾಗೂ ಮಹದೇವಪ್ಪ ರವರ ನೇತೃತ್ವದಲ್ಲಿ ಒಳಮೀಸಲಾತಿ ಅನುಷ್ಠಾನವಾಗಲಿದೆ ವೀನಾ ಕಾರಣ ಗೊಂದಲಕ್ಕೆ ಒಳಗಾಗದಿರಿ ಆಹಾರ ಸಚಿವ:- ಕೆಹೆಚ್. ಮುನಿಯಪ್ಪ

Spread the loveಹಸಿರುಕ್ರಾಂತಿ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪ ಪ್ರಧಾನಿ ಹಾಗೂ ತಳ ಸಮುದಾಯಗಳ ಆಶಾಕಿರಣ ಡಾ. ಬಾಬು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ