Breaking News

ಬಿವಿವಿ ಸಂಘದ ಮೂರು ಮಹಾವಿದ್ಯಾಲಯಗಳಲ್ಲಿ ಐಟಿಇಪಿ ಕೋರ್ಸ್

Spread the love

ಬಾಗಲಕೋಟೆ:  ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿವಿವಿ ಸಂಘದ ಮೂರು ಮಹಾವಿದ್ಯಾಲಯಗಳಲ್ಲಿ ನಾಲ್ಕು ವರ್ಷಗಳ ಸಂಯುಕ್ತ ಶಿಕ್ಷಕರ ಶಿಕ್ಷಣ ಪದವಿ(ಐಟಿಇಪಿ) ಕೋರ್ಸ್ ಆರಂಭಿಸಲಾಗುತ್ತದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ಸಂಘದ ಮಿನಿ ಸಭಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾಲ್ಕು ವರ್ಷದ ಬಿಎ ಬಿಎಡ್, ಬಿಎಸ್ಸಿ ಬಿಎಡ್ ಪದವಿ ಪ್ರಾರಂಭಿಸಲು ಕೇಂದ್ರ ಸರ್ಕಾರದ ಎನ್‌ಸಿಟಿಇ ಅನುಮತಿ ನೀಡಿದೆ ಎಂದರು.
ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬಿಎ ಬಿಎಡ್, ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ಬಿಎಡ್ ಹಾಗೂ ಮುಧೋಳದ ಬಿವಿವಿ ಸಂಘದ ಎಸ್.ಆರ್. ಕಂಠಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎ ಬಿಎಡ್, ಬಿಎಸ್ಸಿ ಬಿಎಡ್ ಹೊಸ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಹೊಸದಾಗಿ ಆರಂಭಗೊಳ್ಳುವ ಶಿಕ್ಷಕರ ಶಿಕ್ಷಣ ಪದವಿ ಕೋರ್ಸ್ ಸೇರಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ನಾಲ್ಕು ವರ್ಷಗಳ ಸಂಯುಕ್ತ ಶಿಕ್ಷಕರ ಶಿಕ್ಷಣದ ಪದವಿ ಜೊತೆಗೆ ಬಿಎಡ್ ಮುಗಿಸಿಕೊಳ್ಳುವ ವಿಶೇಷ ಅವಕಾಶ ಇದರಲ್ಲಿ ಇದೆ. ಪ್ರತ್ಯೇಕವಾಗಿ ಬಿಎಡ್ ಕಲಿಕೆಗಿಂತ ಒಂದು ವರ್ಷ ಕಡಿಮೆ ಆಗಲಿದೆ. ಪಿಯುಸಿ ದ್ವಿತೀಯ ವರ್ಷದಲ್ಲಿ ಶೇ 50 ಅಂಕಗಳೊಂದಿಗೆ ಉತ್ತೀರ್ಣರಾದವರು ಅಥವಾ ಪರೀಕ್ಷೆಗೆ ಹಾಜರಾದವರು ನ್ಯಾಷನಲ್ ಟೆಸ್ಟಿಂಗ್ ಏಜನ್ಸಿಯವರು ನಡೆಸುವ ಆನ್‌ಲೈನ್ ನಲ್ಲಿ ಅರ್ಜಿ ತುಂಬಬಹುದಾಗಿದೆ. ಪರೀಕ್ಷೆಯು ಆನ್‌ಲೈನ್ ಪರೀಕ್ಷೆಯಾಗಿರುತ್ತದೆ ಎಂದರು.
ಈ ಪದವಿಯನ್ನು ಪಡೆದವರು ದೇಶದ ಯಾವುದೇ ರಾಜ್ಯಗಳಲ್ಲಿ ಶಿಕ್ಷಕರಾಗುವ ಅರ್ಹತೆ ಪಡೆಯ್ತುತಾರೆ. ಅರ್ಜಿ ಸಲ್ಲಿಸಲು ಮಾ. 10 ಕೊನೆಯ ದಿನವಾಗಿದೆ. ಏಪ್ರಿಲ್ 17 ರಂದು ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಎಸ್.ಆರ್. ಮನಹಳ್ಳಿ ಮಾತನಾಡಿ, ಅರ್ಜಿ ಸಲ್ಲಿಸಲು ಫೆ. 12 ರಿಂದ ಮಾ. 10 ರವರೆಗೆ ಅವಕಾಶ ಇದ್ದು, ಪ್ರವೇಶ ಪರೀಕ್ಷೆಯೂ ಕನ್ನಡ ಭಾಷೆ ಸೇರಿ 13 ಭಾಷೆಗಳಲ್ಲಿ ನಡೆಯುತ್ತದೆ. 180 ನಿಮಿಷಗಳ ಪರೀಕ್ಷಾ ಅವಧಿಯಲ್ಲಿ 181 ಪ್ರಶ್ನೆಗಳು ಇದ್ದು, ಕನಿಷ್ಠ 160 ಅಂಕ ಪಡೆದರೆ ಮಾತ್ರ ಕೋರ್ಸ್‌ಗೆ ಅರ್ಹರಾಗುತ್ತಾರೆ. ಈ ಕೋರ್ಸ್‌ನಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಸಮರ್ಥ ಶಿಕ್ಷಕರು ಹೊರಬರಬೇಕು ಎನ್ನುವ ಉದ್ದೇಶ ಇದೆ. ದೇಶದಲ್ಲಿ ಈ ವರ್ಷ 223 ಕಾಲೇಜುಗಳಿಗೆ ಪ್ರವೇಶಾತಿ ಅವಕಾಶ ಇದ್ದು, ಇವುಗಳ ಪೈಕಿ ಬಿವಿವಿ ಸಂಘದ ಮೂರು ಕಾಲೇಜುಗಳಿಗೆ ಅವಕಾಶ ದೊರೆತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮಹಾವಿದ್ಯಾಲಯಗಳ ಮುಖ್ಯಸ್ಥರು ಇದ್ದರು.

Spread the love

About Laxminews 24x7

Check Also

ರಾಂಪೂರದಲ್ಲಿ ಚರಂತಿಮಠ ಪರ ಬಿಜೆಪಿ-ಜೆಡಿಎಸ್ ಶಕ್ತಿ ಪ್ರದರ್ಶನ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

Spread the loveಬಾಗಲಕೋಟೆ: ಉಪಚುನಾವಣೆ ಹಿನ್ನೆಲೆಯಲ್ಲಿ ರಾಂಪೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠರ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ