Breaking News

ಬೆಳಗಾವಿಯಲ್ಲಿ ಗಗನ ಮುಟ್ಟಿದ ಒಣ ಮೆನಸಿನಕಾಯಿ ಬೆಲೆ

Spread the love

ಬೆಳಗಾವಿ:  ಗ್ರಾಹಕರಿಗೆ ಘಾಟು ತಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ‌ ಇಳುವರಿ‌ ಬಾರದ ಹಿನ್ನೆಲೆಯಲ್ಲಿ ಮೆಣಸಿನಕಾಯಿ‌ ದರ ಮಾರುಕಟ್ಟೆಯಲ್ಲಿ  ದರ 500 ರೂ.‌ ಗಡಿ ದಾಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಅಂತಾ ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಬೇಸಿಗೆ ಶುರುವಾದರೆ ಸಾಕು ಉತ್ತರ ಕರ್ನಾಟಕ ಜನರು ವರ್ಷಪೂರ್ತಿ ಆಗುವಷ್ಟು ಖಾರವನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಈಗ ಬೇಸಿಗೆ ಶುರುವಾಗಿದ್ದು, ಮೆಣಸಿನಕಾಯಿ ತರಲು ಮಾರುಕಟ್ಟೆಗೆ ಬರುವ ಕುಂದಾನಗರಿ ಗ್ರಾಹಕರಿಗೆ ದರ ಕೇಳಿ ತಲೆ ತಿರುಗುತ್ತಿದೆ. ಕಳೆದ ವರ್ಷ ಕೆಜಿಗೆ 200-300 ರೂ‌ಪಾಯಿಗೆ ಮಾರಾಟವಾಗುತ್ತಿದ್ದ ಮೆಣಸಿನಕಾಯಿ‌ ಈಗ 500 ರೂ‌. ಗಡಿ ದಾಟಿದ್ದು ಜನರನ್ನು ಚಿಂತೆಗೀಡು ಮಾಡಿದೆ.

ಸದ್ಯ ಬೆಳಗಾವಿಯಲ್ಲಿ ನಂಬರ್ 1 ಕ್ವಾಲಿಟಿ 650-700ರೂ., ನಂ.2 400-450 ರೂ. ಮತ್ತು ಸಂಕೇಶ್ವರ ಮತ್ತು ಗುಂಟೂರ ಜವಾರಿ ಮೆಣಸಿನಕಾಯಿ 350 ರೂ. ಮಾರಾಟವಾಗುತ್ತಿದೆ. ಗ್ರಾಹಕರು ದರ ಕಡಿಮೆ ಮಾಡುವಂತೆ ವ್ಯಾಪಾರಿಗಳೊಡನೆ ಚೌಕಾಶಿ‌ ಮಾಡುತ್ತಿದ್ದಾರೆ. ಆದರೆ, ವ್ಯಾಪಾರಿಗಳು ನಮಗೆ ನಷ್ಟ‌ ಮಾಡಿಕೊಂಡು ಹೇಗೆ ಕೊಡೋಣ ಎನ್ನುತ್ತಿದ್ದಾರೆ. ದರ ದುಪ್ಪಟ್ಟಾಗಿದ್ದರಿಂದ 10 ಕೆ.ಜಿ ಖರೀದಿಸುವವರು 5‌ ಕೆಜಿ ಮಾತ್ರ ಮನೆಗೆ ಒಯ್ಯುತ್ತಿದ್ದಾರೆ. ಬಹಳಷ್ಟು ಜನರು ದರ ಕೇಳಿ ಖಾಲಿ ಕೈಯಲ್ಲಿ ಮುಂದೆ ಹೋಗುತ್ತಿದ್ದಾರೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಅನಧಿಕೃತ ಖಾಸಗಿ ಹೂವಿನ ಮಾರುಕಟ್ಟೆ ಅಟ್ಟಹಾಸಕ್ಕೆ ಸರ್ಕಾರಿ ವ್ಯಾಪಾರಿಗಳು ಕಂಗಾಲು ದಂಡು ಮಂಡಳಿ ಮೊರೆ ಹೋಗಿ ನ್ಯಾಯಕ್ಕಾಗಿ ಆಗ್ರಹ..ಕೂಡಲೇ ಮಾರುಕಟ್ಟೆ ಬಂದ್ ಮಾಡಲೂ ಒತ್ತಾಯ!!!

Spread the loveಕುಂದಾನಗರಿ ಬೆಳಗಾವಿಯಲ್ಲಿ ಹೂವಿನ ವ್ಯಾಪಾರಿಗಳ ನಡುವೆ ಕಿಚ್ಚು ಹತ್ತಿಕೊಂಡಿದೆ. ಎಪಿಎಂಸಿ ಮತ್ತು ತೋಟಗಾರಿಕಾ ಇಲಾಖೆಯ ಅನುಮತಿ ಇಲ್ಲದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ