Breaking News

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಮೆಟ್ರೋ ನಿಲ್ದಾಣಗಳ ಹತ್ತಿರದಲ್ಲೇ ಬಸ್ ನಿಲ್ದಾಣ ಓಪನ್

Spread the love

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಮೆಟ್ರೋ ನಿಲ್ದಾಣಗಳ ಹತ್ತಿರದಲ್ಲೇ ಬಸ್‌ ನಿಲ್ದಾಣಗಳನ್ನು ಒದಗಿಸಲಾಗಿದೆ.

ಸಂಚಾರ ಪೊಲೀಸ್ ಇಲಾಖೆ ಸಹಯೋಗದಿಂದ ಬಿಎಂಆರ್​ಸಿಎಲ್ ನಿಲ್ದಾಣಗಳ ಓಪನ್‌ಗೆ ಸ್ಥಳ ಪರಿಶೀಲನೆ ನಡೆಸಿದೆ. ನೇರಳೆ ಮಾರ್ಗದಲ್ಲಿ 2, ಹಸಿರು ಮಾರ್ಗದಲ್ಲಿ 8 ಮೆಟ್ರೋ ನಿಲ್ದಾಣಗಳ ಬಳಿ ಓಪನ್ ಆಗಲಿವೆ. ಈ ಬಗ್ಗೆ ಬಿಎಂಆರ್‌ಸಿಎಲ್‌ನಿಂದ ಮಾಧ್ಯಮ ಪ್ರಕಟಣೆ ಜಾರಿ ಮಾಡಿದೆ.

ಹೊಸದಾಗಿ ಒದಗಿಸಲಾದ ಬಸ್ ನಿಲ್ದಾಣ ಯಾವ್ಯಾವು?

ನೇರಳೆ ಮಾರ್ಗ
* ಟ್ರಿನಿಟಿ: ಎಂ.ಜಿ.ರಸ್ತೆಯಿಂದ ಹಲಸೂರು ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೊಸ ಬಸ್ ನಿಲ್ದಾಣ
* ಹೂಡಿ: ಸೀತಾರಾಮಪಾಳ್ಯದಿಂದ ಗರುಡಾಚರ್ಪಾಳ್ಯ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿಹೊಸ ಬಸ್ ನಿಲ್ದಾಣ

ಹಸಿರು ಮಾರ್ಗ
* ಮಂಜುನಾಥ ನಗರ: ಚಿಕ್ಕಬಿದರಕಲ್ಲುದಿಂದ ನಾಗಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೊಸ ಬಸ್ ನಿಲ್ದಾಣ
* ಪೀಣ್ಯ: ಗೋರಗುಂಟೆಪಾಳ್ಯದಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೊಸ ಬಸ್ ನಿಲ್ದಾಣ
* ಲಾಲ್‌ಬಾಗ್: ಸೌತ್ ಎಂಡ್ ಸರ್ಕಲ್‌ನಿಂದ ನ್ಯಾಷನಲ್ ಕಾಲೇಜ್ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೊಸ ಬಸ್ ನಿಲ್ದಾಣ
* ಸೌತ್ ಎಂಡ್ ಸರ್ಕಲ್: ಲಾಲ್‌ಬಾಗ್‌ನಿಂದ ಜಯನಗರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೊಸ ಬಸ್ ನಿಲ್ದಾಣ
* ಜಯಪ್ರಕಾಶ್ ನಗರ: ಬನಶಂಕರಿಯಿಂದ ಯಲಚೇನಹಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೊಸ ಬಸ್ ನಿಲ್ದಾಣ

ಯಲಚೇನಹಳ್ಳಿಯಿಂದ ಬನಶಂಕರಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೊಸ ಬಸ್ ನಿಲ್ದಾಣ
* ಕೊಣನಕುಂಟೆ ಕ್ರಾಸ್: ದೊಡ್ಡಕಲ್ಲಸಂದ್ರದಿಂದ ಯಲಚೇನಹಳ್ಳಿ ಕಡೆಗೆ ಸಂಚರಿಸುವ ಹೊಸ ಬಸ್ ನಿಲ್ದಾಣ

ಯಲಚೇನಹಳ್ಳಿಯಿಂದ ದೊಡ್ಡಕಲ್ಲಸಂದ್ರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೊಸ ಬಸ್ ನಿಲ್ದಾಣ
* ವಾಜರಹಳ್ಳಿ: ತಲಘಟ್ಟಪುರದಿಂದ ದೊಡ್ಡಕಲ್ಲಸಂದ್ರ ಕಡೆಗೆ ಸಂಚರಿಸುವ ಹೊಸ ಬಸ್ ನಿಲ್ದಾಣ

ದೊಡ್ಡಕಲ್ಲಸಂದ್ರದಿಂದ ತಲಘಟ್ಟಪುರ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಸಮೀಪ ಮತ್ತೊಂದು ಹೊಸ ಬಸ್ ನಿಲ್ದಾಣ
* ತಲಘಟ್ಟಪುರ: ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ವಜ್ರಹಳ್ಳಿ ಕಡೆಗೆ ಸಂಚರಿಸುವ ಬಸ್ ನಿಲ್ದಾಣ

ವಜ್ರಹಳ್ಳಿಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ಕಡೆಗೆ ಸಂಚರಿಸುವ ಪ್ರಯಾಣಿಕರಿಗಾಗಿ ‘ಎ’ ಪ್ರವೇಶದ್ವಾರದ ಬಳಿ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ.


Spread the love

About Laxminews 24x7

Check Also

ಯಾವುದೇ ದರ ಏರಿಕೆ ಮಾಡಿದ್ರೂ ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ಸಿಎಂ ಭ್ರಮೆ: ಹೆಚ್‌ಡಿಕೆ ಕಿಡಿ

Spread the loveಬೆಂಗಳೂರು: ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ