ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ಬಿಂದಾಸಾಗಿ ವರ್ತಿಸುತ್ತಿದ್ದವರಿಗೆ ಶನಿವಾರ ತಡ ಸಂಜೆ ಉಪನಗರ ಪೊಲೀಸರು ಏರಿಯಾ ಡಾಮಿನೇಷನ್ ನಡೆಸುವ ಮೂಲಕ ಕಾನೂನು ಉಲ್ಲಂಘಿಸುವವರೆಗೆ ಬಿಸಿ ಮುಟ್ಟಿಸಿದರು.
ಧಾರವಾಡ ನಗರದ ಸಪ್ತಾಪುರ, ಕರ್ನಾಟಕ ಕಾಲೇಜು ವೃತ್ತ ಸೇರಿದಂತೆ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಮುಖ ವೃತ ಸೇರಿ ಜನನಿಬಿಡ ಪ್ರದೇಶದಲ್ಲಿ ಸಂಚಾರ ನಡೆಸುವ ಮೂಲಕ ಪೊಲೀಸರು ಏರಿಯಾ ಡಾಮಿನಿಷೇನ್ ಮಾಡಿದರು. ಸಂಚಾರಿ ನಿಯಮ ಉಲ್ಲಂಘಿಸಿ ಬೈಕ ಸವಾರರು, ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ, ಮಧ್ಯಪಾನ ಮಾಡುತ್ತಿದವರು ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ನಿಂತು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಕಿಡಗೇಡಿಗಳನ್ನು ಠಾಣೆಗೆ ಕರೆತಂದು ದಂಡಾಸ್ತ್ರ ಪ್ರಯೋಗಿಸಿ ಬಿಸಿ ಮುಟ್ಟಿಸಿದ್ದಾರೆ. ಇನ್ನೂ ಇದರ ಜತೆಗೆ ಕಾನೂನು ಪಾಠ ಹೇಳಿ, ಇನ್ನೊಂದು ಬಾರಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಯಿತು. ಎಸಿಪಿ ಪ್ರಶಾಂತ ಸಿದ್ಧನಗೌಡರ್, ಠಾಣೆಯ ಸಿಪಿಐ ಪ್ರಭು ಗಂಗೆನಹಳ್ಳಿ, ಪಿಎಸ್ಐ ಸೇರಿದಂತೆ ಅನೇಕ ಸಿಬ್ಬಂದಿ ಉಪಸ್ಥಿತರಿದ್ದರು.
Laxmi News 24×7