Breaking News

ಭಾರತದ ವಿರುದ್ಧ ಪಾಕ್‌ ಪಂದ್ಯವಾಡಲ್ಲ: ಶೆಹಾಬಾಜ್ ಷರೀಫ್

Spread the love

ಇಸ್ಲಾಮಾಬಾದ್‌: ಭಾರತದ  ವಿರುದ್ಧ ಟಿ20 ವಿಶ್ವಕಪ್‌ ಕ್ರಿಕೆಟ್‌  ಪಂದ್ಯ ಆಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಾಬಾಜ್ ಷರೀಫ್ ಹೇಳಿದ್ದಾರೆ.

ಕ್ಯಾಬಿನೆಟ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ನಾವು ಭಾರತದ ವಿರುದ್ಧ ಪಂದ್ಯ ಆಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಕ್ರೀಡೆಯಲ್ಲಿ ಯಾವುದೇ ರಾಜಕೀಯ ಇರಬಾರದು; ಇದು ನಮ್ಮ ಸ್ಪಷ್ಟ ನಿಲುವು. ಎಚ್ಚರಿಕೆಯಿಂದ ಚರ್ಚಿಸಿದ ನಂತರ ನಾವು ಈ ನಿಲುವನ್ನು ತೆಗೆದುಕೊಂಡಿದ್ದೇವೆ. ನಾವು ಬಾಂಗ್ಲಾದೇಶದೊಂದಿಗೆ ಇದ್ದೇವೆ ಮತ್ತು ಇದು ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ಭದ್ರತಾ ಕಾಣ ನೀಡಿ ಬಾಂಗ್ಲಾದೇಶ ಭಾರತಕ್ಕೆ ಬರುವುದಿಲ್ಲ. ಶ್ರೀಲಂಕಾದಲ್ಲಿ ಟೂರ್ನಿ ಆಡಿಸುವಂತೆ ಬೇಡಿಕೆ ಇಟ್ಟಿತ್ತು. ಬಾಂಗ್ಲಾದ ಈ ನಿಲುವಿಗೆ ಪಾಕ್‌ ಬೆಂಬಲ ವ್ಯಕ್ತಪಡಿಸಿತ್ತು. ಆದರೆ ಐಸಿಸಿ ಬಾಂಗ್ಲಾದ ಬೇಡಿಕೆಯನ್ನು ತಿರಸ್ಕರಿಸಿತ್ತು.

ಫೆಬ್ರವರಿ 15 ರಂದು ಕೊಲಂಬೋದಲ್ಲಿರುವ (Colombo) ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ, ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.

Spread the love

About Laxminews 24x7

Check Also

ಕೆನಡಾ ಮಾರಾಟ ಮಾಡುವ ವಿಮಾನಗಳಿಗೆ 50% ಸುಂಕ ವಿಧಿಸಿದ ಟ್ರಂಪ್‌

Spread the loveವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಅವರು ಕೆನಡಾ  ಕಂಪನಿ ಮಾರಾಟ ಮಾಡುವ ಯಾವುದೇ ವಿಮಾನದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ